ಬೇಡ ಜಂಗಮ ಸಮಾಜಕ್ಕೆ ಅನ್ಯಾಯ ಮಾಡಬೇಡಿ
ತಾಳಿಕೋಟಿ 16: ಬೇಡ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಲ್ಲಿ ಸರಕಾರ ತೋರುತ್ತಿರುವ ನಿರ್ಲಕ್ಷ್ಯ ಸಮಾಜದೊಂದಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸದೆ ಹೋದಲ್ಲಿ ಇದಕ್ಕಿಂತಲೂ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಎಂದು ಚಬನೂರು ಹಿರೇಮಠದ ಜ್ಯೋತಿಷ್ಯರತ್ನ ಪ. ಪೂ. ರಾಮಲಿಂಗಯ್ಯ ಸ್ವಾಮೀಜಿ ತಿಳಿಸಿದರು.
ಬೆಂಗಳೂರಿನ ಫ್ರೀಡಂಪಾಕ್ನಲ್ಲಿ ಬಿ.ಡಿ ಹಿರೇಮಠ ಅವರ ನೇತೃತ್ವದಲ್ಲಿ ಬೇಡ ಜಂಗಮ ಪರಿಶಿಷ್ಟ ಪ್ರಮಾಣ ಪತ್ರ ಬೇಡಿಕೆಗಾಗಿ ನಡೆಯುತ್ತೀರುವ ಶಾಂತಿಯುತ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಬೇಡ ಜಂಗಮ ಸಮಾಜ ಅತೀ ಹಿಂದುಳಿದ ಸಮಾಜವಾಗಿದ್ದು ಈ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನೀಡುವುದು ಸಂವಿಧಾನ ಬದ್ಧ ಹಕ್ಕಾಗಿದೆ ಆದರೂ ಸರಕಾರಗಳು ಈ ಕುರಿತು ನಿರ್ಲಕ್ಷ್ಯ ತೋರುತ್ತೀರುವುದು ಅಕ್ಷ್ಯಮ್ಯ ಅನ್ಯಾಯವಾಗಿದೆ ಇದನ್ನು ಸರಿಪಡಿಸದಿದ್ದಲ್ಲಿ ಸರಕಾರ ಇದರ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಶಾಂವೀರಯ್ಯ ಹಿರೇಮಠ, ಫರತಾಬಾದ ಮಲ್ಲಿಕಾರ್ಜುನ ಸರ್ ಇದ್ದರು