ತಾಳಿಕೋಟಿ

ವೀರಸಾವರ್ಕರ ಅಪಮಾನ ಮುಂದುವರೆದರೆ ಜಿಲ್ಲೆಯಾದ್ಯಂತ ಹೋರಾಟ: ಕೂಚಬಾಳ

ವೀರಸಾವರ್ಕರ ಅಪಮಾನ ಮುಂದುವರೆದರೆ ಜಿಲ್ಲೆಯಾದ್ಯಂತ ಹೋರಾಟ: ಕೂಚಬಾಳ

ತಾಳಿಕೋಟೆ 23: ವೀರ ಸಾವರ್ಕರ ವಿವಾದ ಸೃಷ್ಟಿಕರ್ತರು ಕಾಂಗ್ರೆಸ್ಸಿಗರು, ವೀರಸಾವರ್ಕರನ್ನು ಎಲ್ಲೆಂದರಲ್ಲಿ ಅಪಮಾನಿಸುವ ಕಾಂಗ್ರೆಸ್ಸಿನ ನೀಚ ರಾಜಕಾರಣವನ್ನು ನಾವೂ ಸಹಿಸುವುದಿಲ್ಲ. ಹಿಂದುತ್ವದ ವಿರುದ್ದ ನಿಲುವನ್ನು ತಾಳಿದ್ದರ ಪರಿಣಾಮವಾಗಿಯೇ ದೇಶದಲ್ಲಿ ಕಾಂಗ್ರೇಸ್ ದುಸ್ಥಿತಿ ತಲುಪಿದ್ದು, ಅದನ್ನು ಮುಂದುವರೆಸಿದರೆ ಬರುವ ಎಲ್ಲಾ ರಾಜ್ಯಗಳಲ್ಲಿಯೂ ಇರುವ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಹೇಳಿದರು. 

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತ್ಯಾಗ, ಬಲಿದಾನದಿಂದ ಪಡೆದ ಸ್ವಾತಂತ್ರ-್ಯ ಸುಖಾಸುಮ್ಮನೆ ಬಂದಿಲ್ಲ. ವೀರಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ-್ಯ ಹೋರಾಟಗಾರ. ಅವರ ಇಡಿ ಕುಟುಂಬ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿತ್ತು. ಜೈಲುವಾಸ ಅನುಭವಿಸಿದ್ದಾರೆ. ಆಗಿನ ಕಾಂಗ್ರೆಸ್ ಕೂಡಾ ವೀರ ಸಾವರಕರರ ನಿಲುವುಗಳನ್ನು ಒಪ್ಪಲಾಗಿತ್ತು. ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿರವರು ವೀರ ಸಾವರಕರನ ಅಂಚೆ ಲಕೋಟೆ ಮಾಡಿ, ಸಾವರ್ಕರ ಸ್ವಾತಂತ್ರ-್ಯ ಹೋರಾಟಗಾರ ಎಂದು ಒಪ್ಪಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ನೈತಿಕತೆ ಅರೀವೀಲ್ಲದೆ ಮಾತನಾಡುತ್ತಿದ್ದಾರೆ, ಹಿಂದು ಧಾರ್ಮಿಕ ಪದ್ದತಿಯಂತೆ ಮಡಿ,ಮೈಲಿಗೆ ನಮ್ಮ ಧಾರ್ಮಿಕ ಶಿಷ್ಟಾಚಾರ. ಆದರೆ ಅದನ್ನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವುದು ಎಷ್ಟು ಸಮಂಜಸ ಎನ್ನುವುದನ್ನು ಅವರೇ ಅವಲೋಕನ ಮಾಡಿಕೊಳ್ಳಲಿ. ಒಬ್ಬ ದೇಶಭಕ್ತನ ವಿರುದ್ದ ಉಡಾಫೆ ಉತ್ತರ ನೀಡುವ ಅವರ ಭಾವಚಿತ್ರ ಸುಡುವ ಕಾರ್ಯ ಒಬ್ಬ ಸ್ವಾತಂತ್ರ-್ಯ ಹೋರಾಟಗಾರನಿಗೆ ಹಾಗೂ ದೇಶಕ್ಕೆ ಮಾಡುವ ದೊಡ್ಡ ಅವಮಾನವಾಗಿದೆ.  

ದೇಶ ಪ್ರೇಮಕ್ಕಾಗಿ,ದೇಶಾಭಿಮಾನಕ್ಕಾಗಿ,ನಮ್ಮ ಪಕ್ಷ ಎಂದೆಂದಿಗೂ ಹಿಂಜರಿಯುವುದಿಲ್ಲ. ಶೋಮವಾರ ದಿವಸ ಕಾಂಗ್ರೆಸ್ ಪಕ್ಷದ ಕಛೇರಿಗೆ ಮುತ್ತಿಗೆ ಹಾಕಿ ಪೊಟೋ ಅಂಟಿಸಿದ ವಿಚಾರವಾಗಿ, ಕೇಸ್ ದಾಖಲಿಸಲು ತೆರಳಿದ ಕಾಂಗ್ರೇಸ್ ಪಕ್ಷದ ನಡೆ ಖಂಡನೀಯವಾಗಿದೆ. ನಾವೂ ಮೊದಲು ಭಾರತೀಯರು. ನಂತರ ಪಕ್ಷ ಸಿದ್ದಾಂತಿಗಳಾಗಿದ್ದೇವೆ. ದೇಶಕ್ಕಿಂತ ಯಾವುದು ದೊಡ್ಡದಲ್ಲ. ಕೇಸುಗಳಿಗೆ ಅಂಜುವರಲ್ಲ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಬಗ್ಗುವವರು ನಾವಲ್ಲ, ನಾವೂ ನಮ್ಮ ದೇಶದ ಸ್ವಾಯತ್ತತೆಗಾಗಿ, ನಮ್ಮ ದೇಶ ಕಂಡ ರಾಷ್ಟ್ರದ ಸೇವಕರಿಗಾಗಿ ಮಾನ ಅಪಮಾನ ನಮ್ಮ ಆತ್ಮಗೌರವದ ಪ್ರಶ್ನೆಯಾಗಿದೆ. ಕಾಂಗ್ರೇಸ್ ಸ್ವಾತಂತ್ರ ಹೋರಾಟಗಾರರ ಅಪಮಾನ ಮುಂದುವರೆಸಿದರೆ ಜಿಲ್ಲೆಯಾಧ್ಯಂತ ಉಗ್ರವಾದ ಹೋರಾಟಗಳನ್ನು ಮಾಡಲಾಗುವದು ಎಂದು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಮಂಜುನಾತ ಶೇಟ್ಟಿ, ನಗರ ಘಟಕದ ಅಧ್ಯಕ್ಷ ರಾಗು ಚವ್ಹಾಣ, ಶಶಿಧರ ಡಿಸಲೆ, ನಾಗರಾಜ ಬಳಗಾರ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ