ದಿ. 28 ರಿಂದ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ಕಾರ್ಯಕ್ರಮ
ಬ್ಯಾಡಗಿ 26: ಸ್ಥಳೀಯ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ದಿ. 28 ರಿಂದ 30 ರವರೆಗೆ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಪತ್ರಿಕಾ ಗೋಷ್ಠಿಯಲ್ಲಿ ಬುಧವಾರ ತಿಳಿಸಿದರು
ಅವರು ಸ್ಥಳೀಯ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರ ವಕೀಲರ ಪರಿಷತ್ , ಜಿಲ್ಲಾ ನ್ಯಾಯಾಂಗ ಹಾಗೂ ತಾಲೂಕಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು. ದಿನಾಂಕ 28 ರಂದು ಬೆಳಿಗ್ಗೆ 10-30 ಘಂಟೆಗೆ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್.ನಟರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕಾ ಅಧ್ಯಕ್ಷ ಶಂಕರ ಬಾರ್ಕಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿ.ಬಿ.ಮಂಗಳೇಕರ, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ, ಅತಿಥಿಗಳಾಗಿ ಕೆ.ಬಿ.ನಾಯಕ, ಎ ಎ ಮುಗುದುಮ್, ವಿ.ಡಿ.ಕಾಮರಡ್ಡಿ, ಎಸ್.ಎಚ್.ಅಸೀಫ್ ಅಲಿ, ಕೆ.ಕೋಟೇಶ್ವರರಾವ್, ಎಸ್.ಎಸ್.ಮಿಸಲಕೋಡ, ಎಂ.ವಿ.ಹೀರೆಮಠ ಆಗಮಿಸಲಿದ್ದಾರೆ.ಅಂದಿನ ದಿವಸ ಬೆಳಗ್ಗೆ 11-30 ರಿಂದ 1-30 ರ ವರೆಗೆ "ಸೈಬರ್ ಕಾನೂನು" ಪ್ರಥಮ ಗೋಷ್ಠಿ ನಡೆಯಲಿದೆ. ನ್ಯಾಯಮೂರ್ತಿ ಆರ್ ನಟರಾಜ್ ಉಪನ್ಯಾಸ ನೀಡಲಿದ್ದು, ನ್ಯಾಯವಾದಿಗಳಾದ ಎಸ್.ಎಚ್. ಜತ್ತಿ, ಜಿ.ಎಂ.ಅಂಗಡಿ, ಬಿ.ಎಂ.ಗೌರಾಪುರ, ಪಿ.ಆರ್.ಮಠದ, ವಿ.ಎಸ್.ಕಡಗಿ ಉಪಸ್ಥಿತರಿರುವರು. ಮಧ್ಯಾಹ್ನ 2 ರಿಂದ 3-30 ರವರೆಗೆ 2 ನೇ ಗೋಷ್ಠಿ "ಕೌಟುಂಬಿಕ ಕಾನೂನುಗಳು" ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಉಪನ್ಯಾಸ ನೀಡಲಿದ್ದು, ನ್ಯಾಯವಾದಿಗಳಾದ ಬಿ.ಎಚ್.ಬುರಡಿಕಟ್ಟಿ, ಬಿ.ಎಸ್.ಚೂರಿ, ಎಫ್.ಎಂ.ಮುಳಗುಂದ ಆರಿ್ವ.ಬೆಳಕೇರಿಮಠ,ಎಂ.ಆರ್.ಹೊಮ್ಮರಡಿ ಉಪಸ್ಥಿತರಿರುವರು. ಮಧ್ಯಾಹ್ನ 3-30 ರಿಂದ 5-30 ರವರೆಗೆ 3ನೇ ಗೋಷ್ಠಿ "ವಕೀಲರ ಕಾಯ್ದೆ ಮತ್ತು ವೃತ್ತಿ ನೈತಿಕತೆ" ಜಿಲ್ಲಾ ನ್ಯಾಯಾಧೀಶ ನಿಂಗನಗೌಡ ಪಾಟೀಲ ಉಪನ್ಯಾಸ ನೀಡಲಿದ್ದು, ನ್ಯಾಯವಾದಿಗಳಾದ ಟಿ.ಬಿ.ಸವಣೂರ, ಎಸ್.ಎನ್.ಚನ್ನಗೌಡ್ರ, ಪಿ.ಸಿ.ಶೀಗಿಹಳ್ಳಿ,ಎಂ.ಎಂ.ಪಾಟೀಲ, ಎಂ.ಜೆ.ಮುಲ್ಲಾ ಉಪಸ್ಥಿತರಿರುವರು,ದಿನಾಂಕ 29 ರಂದು ಬೆಳಿಗ್ಗೆ 10 -30 ರಿಂದ 12 ಗಂಟೆಯವರೆಗೆ ನಾಲ್ಕನೇ ಗೋಷ್ಠಿ ಕ್ರಿಮಿನಲ್ ವಿಚಾರಣೆ ಮಹತ್ವದ ಬಗ್ಗೆ ನಿವೃತ್ತ ನ್ಯಾಯಾಧೀಶ ಎಸ್.ಎಚ್.ಮಿಟ್ಟಲಕೋಡ ಉಪನ್ಯಾಸ ನೀಡಲಿದ್ದು. ನ್ಯಾಯವಾದಿಗಳಾದ ಆರಿ್ಸ.ಗಾಣಗೇರ, ಜಿ.ಎಸ್.ತಟ್ಟಿ, ಎಂ.ಕೆ.ವೀರನಗೌಡ, ಭಾರತಿ ಕುಲಕರ್ಣಿ, ಡಿ.ಎಚ್.ಹುಣಿಸಿಮರದ ಉಪಸ್ಥಿತರಿರುವರು. ಮಧ್ಯಾಹ್ನ 12 ರಿಂದ 2 ರವರೆಗೆ 5ನೇ ಗೋಷ್ಠಿ "ವಾದ ಪ್ರತಿವಾದ ಪತ್ರಗಳ ತಿದ್ದುಪಡಿ ಹಾಗೂ ಜಾಮೀನು ಕುರಿತು ಚಿತ್ರದುರ್ಗ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಎನ್.ಕಲಕಣಿ ಉಪನ್ಯಾಸ ನೀಡಲಿದ್ದು, ನ್ಯಾಯವಾದಿಗಳಾದ ಎಫ್.ಬಿ.ಗಂಜಿಗಟ್ಟಿ, ಎಂ.ಎ.ಅಗಸರ, ಪಿ.ಬಿ.ಸಿಂಗಿ, ಪಿ.ಟಿ.ಪಿಸೆ, ಎಸ್.ಎಸ್.ಶೆಟ್ಟರ ಉಪಸ್ಥಿತರಿರುವರು. ಸಂಜೆ 2-30 ರಿಂದ 5-30 ರವರೆಗೆ " ಭಾರತೀಯ ಸಾಕ್ಷಿ ಅಧಿನಿಯಮ"ದ ಬಗ್ಗೆ ಉಚ್ಛ ನ್ಯಾಯಾಲಯದ ನ್ಯಾಯವಾದೀಶ ಕೆ.ಬಿ.ನಾವಲಗಿಮಠ ಉಪನ್ಯಾಸ ನೀಡಲಿದ್ದು. ನ್ಯಾಯವಾದಿಗಳಾದ ಎಸ್.ಆರಿ್ಹರೇಮಠ, ಎನ್.ಎಂ.ಹುಬ್ಬಳ್ಳಿ, ಕೆ.ಎನ್.ಚಿನವಾಲಗಟ್ಟಿ, ಆರಿ್ಸ.ಶಿಡೇನೂರ, ಕೆ.ಡಿ.ಪಾಟೀಲ ಉಪಸ್ಥಿತರಿರುವರು.
ದಿ. 30 ರಂದು ಬೆಳಿಗ್ಗೆ 10 ರಿಂದ 11-30 ರವರೆಗೆ 7ನೇ ಗೋಷ್ಠಿ "ಮೃತ್ಯು ಪತ್ರ ಕುರಿತು" ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಪಿ.ನಾಯಕ ಉಪನ್ಯಾಸ ನೀಡಲಿದ್ದು, ನ್ಯಾಯವಾದಿಗಳಾದ ಪಿ.ಎಸ್.ಬನ್ನಿಹಟ್ಟಿ, ಸಿ.ಬಿ.ಕಾರಗಿ, ಪಿ.ಸಿ.ಸದಲಗಿ, ಎಂ.ಸಿ.ಯರಗಲ್, ಕೆ.ಎಸ್.ನಾಯ್ಕರ ಉಪಸ್ಥಿತರಿರುವರು.11-30 ರಿಂದ ಸಂಜೆ 4 ಗಂಟೆಯವರೆಗೆ 8ನೇ ಗೋಷ್ಠಿ "ಹಿಂದೂ ಉತ್ತರಾಧಿಕಾರ ಕಾನೂನು" ಕುರಿತು ಹಿರಿಯ ವಕೀಲ ಎನ್.ಶಿವಲಿಂಗಪ್ಪ ಉಪನ್ಯಾಸ ನೀಡಲಿದ್ದು, ಎನ್.ಎಸ್.ಬಟ್ಟಲಕಟ್ಟಿಎಸ್.ವಿ. ಹೊಸಮನಿ, ಎಚ್.ಎಸ್.ಜಾದವ, ಎಂ.ಎಚ್.ಕಾಯಕದ, ವೈ.ಎಚ್.ಕುಡಪಲಿ ಉಪಸ್ಥಿತರಿರುವರೆಂದು ತಿಳಿಸಿದರಲ್ಲದೇ ಅಂದೇ ಸಂಜೆ ಸಮಾರೋಪ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.