ಕಾರವಾರ

ನೆಹರು ಯುವ ಕೇಂದ್ರದ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ಓಟಕ್ಕೆ ಜಿಲ್ಲಾಧಿಕಾರಿ ಚಾಲನೆ

ನೆಹರು ಯುವ ಕೇಂದ್ರದ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ಓಟಕ್ಕೆ ಜಿಲ್ಲಾಧಿಕಾರಿ ಚಾಲನೆ

ಕಾರವಾರ  : ನೆಹರು ಯುವ ಕೇಂದ್ರದ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸದದ ಅಂಗವಾಗಿ ಫಿಟ್ ಇಂಡಿಯಾ ಫ್ರೀಡಮ್ ಓಟಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ  ಜಿಲ್ಲಾಧಿಕಾರಿ ಕಚೇರಿ ಬಳಿ ಚಾಲನೆ ನೀಡಿದರು.   ಫಿಟ್ ಇಂಡಿಯಾ ಫ್ರೀಡಮ್ ಓಟವನ್ನು  ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಿಂದ ಪ್ರಾರಂಭಿಸಿ ಜೈಲು ಮಾರ್ಗವಾಗಿ ಕಾಳಿ ರಿವರ್ ಗಾರ್ಡನ್ ತಲುಪಿ ಅದೇ ಮಾರ್ಗವಾಗಿ ಜಿಲ್ಲಾಧಿಕಾರಿ ಆವರಣದಲ್ಲಿ ತಲುಪುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. 

 ಕಾರವಾರ ನಗರ ಸಭೆ ಯುವ ಸಬಲೀಕರಣ ಇಲಾಖೆ, ರೋಟರಿ ಕ್ಲಬ್,  ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ  ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮವು ರಾಷ್ಟ್ರಗೀತೆ ಹಾಗೂ  ಪ್ರತಿಜ್ಞೆಯೊಂದಿಗೆ  ಪ್ರಾರಂಭಿಸಲಾಯಿತು. ಎನ್‌.ಸಿ.ಸಿ ಕೆಡೆಟ್ಸ,  ಎನ್‌ಎಸ್‌ಎಸ್ ವಿದ್ಯಾರ್ಥಿಗಳು , ಸ್ಪೋರ್ಟ್ಸ್‌, ಸ್ಕೌಟ್ಸ ಮತ್ತು  ಗೈಡ್ಸ , ಯುವಜನರು  ಫಿಟ್ ಇಂಡಿಯಾ ಫ್ರೀಡಮ್ ಓಟ  ಪಾಲ್ಗೊಂಡಿದ್ದರು. ಯುವ ಜನರಿಗೆ ನೆಹರು ಯುವ ಕೇಂದ್ರದ ವತಿಯಿಂದ ಟಿ ಶರ್ಟ್‌, ಕ್ಯಾಪ್ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಆಜಾದಿ ಕಾ ಅಮೃತ ಮಹೋತ್ಸ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ 75 ಹಳ್ಳಿಗಳಲ್ಲಿ ಅಗಸ್ಟ್‌ 13. ರಿಂದ  ಸಪ್ಟೆಂಬರ್ 2.ರವರೆಗೆ  ನೆಹರು ಯುವ ಕೇಂದ್ರದ ಕಾರ್ಯಕರ್ತರಿಂದ ಅಯೋಜಿಸಲಾಗಿದೆ. ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ನಗರಸಭೆಯ ಪೌರಾಯುಕ್ತ ಆರ್‌.ಪಿ.ನಾಯ್ಕ್‌, ಯುವ ಸಬಲೀಕರಣದ ಗಾಯತ್ರಿ. ಜಿ ಹಾಗೂ ನೆಹರು ಯುವ ಕೇಂದ್ರ ಮತ್ತು ಜಿಲ್ಲಾ ಯುವ ಅಧಿಕಾರಿ ಯಶವಂತ ಯಾದವ ಉಪಸ್ಥಿತರಿದ್ದರು. 


ಸುದ್ದಿ ಓದಿ