ಶಿಗ್ಗಾವ್

ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಶಿಗ್ಗಾವಿ 25: ಶಿಗ್ಗಾವಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ವಿತರಣೆ ಮಾಡಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ ವಿಶೇಷ ಮಕ್ಕಳಾಗಿರುವ ವಿಶೇಷ ಚೇತನರು, ದಿವ್ಯ ಚೇತನರು, ಅವರೂ ಸಹಿತ ಎಲ್ಲರಂತೆ ಓಡಾಡಬೇಕು ಅದರಂತೆ ತ್ರಿಚಕ್ರವಾಹನದ ವ್ಯವಸ್ತೆ ಮಾಡಲಾಗಿದೆ, ಅವರಿಗೆ ಸಹಾನುಭೂತಿ ಬೇಡ, ಅವಕಾಶ ಕಲ್ಪಿಸಿ ಸ್ವಾವಲಂಬನೆ ಜೀವನ ನಡೆಸುವಂತಾಗಬೇಕು, ಸರಕಾರದ ಸೌಲಭ್ಯ ಗಳನ್ನ ಸದುಪಯೊಗ ಪಡಿಸಿಕೊಂಡು ಅವರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಗೌರವಯುತ ಜೀವನ ನಡೆಸಬೇಕು ಎಂದ ಅವರು ಮೊದಲು ನಿಮ್ಮ ಮೇಲೆ ನೀವು ವಿಶ್ವಾಸ ಇಟ್ಟುಕೊಂಡು ನಡೆಯಿರಿ ಮುಂದೆ ಒಳ್ಳೆಯದಾಗುತ್ತದೆ ಎಂದು ಕಿವಿ ಮಾತು ಹೇಳಿದರು. 

ಈಗ ಸಾಂಕೇತಿಕವಾಗಿ 20 ಜನರಿಗೆ ತ್ರಿಚಕ್ರವಾಹನ ನೀಡಲಾಗಿದೆ ಮುಂದೆ ವರ್ಷದ ಅಂತ್ಯದೊಳಗೆ ಎಲ್ಲರಿಗೂ ನೀಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹ್ಮದ ರೋಷನ್, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಭಾಜಪ ಅದ್ಯಕ್ಷ ಶಿವಾನಂದ ಮ್ಯಾಗೇರಿ, ಅರ್ಜುನ ಹಂಚಿನಮನಿ, ಸೇರಿದಂತೆ ತಾಲೂಕಿನ ಅಧಿಕಾರಿಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳು ಇದ್ದರು. 


ಸುದ್ದಿ ಓದಿ