ತಾಳಿಕೋಟಿ

ರೋಟರಿ ಕ್ಲಬ್‌ದಿಂದ ಕನ್ನಡಕ ವಿತರಣೆ

ರೋಟರಿ ಕ್ಲಬ್‌ದಿಂದ ಕನ್ನಡಕ ವಿತರಣೆ

ತಾಳಿಕೋಟೆ 26: ತಾಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೇತ್ರದೋಷವುಳ್ಳ 47 ವಿದ್ಯಾರ್ಥಿಗಳಿಗೆ ಪಟ್ಟಣದ ರೋಟರಿ ಕ್ಲಬ್ ವತಿಯಿಂದ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. 

ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಯ ಸಹಕಾರದೊಂದಿಗೆ ಮಕ್ಕಳ ನೇತ್ರ ತಪಾಸಣೆಯನ್ನು ಕಳೆದ ಮೇ ತಿಂಗಳಲ್ಲಿ ನಡೆಸಲಾಗಿತ್ತು. 7ನೆಯ ತರಗತಿಯಿಂದ 10ನೆಯ ತರಗತಿವರೆಗಿನ ಒಟ್ಟು 180 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನೇತ್ರ ತೊಂದರೆಯುಳ್ಳ 42 ಮಕ್ಕಳನ್ನು ಗುರುತಿಸಲಾಗಿತ್ತು ಎಂದು ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಸ್‌.ಮಾಳಿ ತಿಳಿಸಿದರು. ರೋಟರಿಯ ಉಜ್ವಲ ದೃಷ್ಟಿ ಅಭಿಯಾನದಡಿ ಈ ಕೊಡುಗೆಯನ್ನು ನೀಡಲಾಗಿದೆ ಎಂದು ಡಾ.ವಿ.ಎಸ್‌.ಕಾರ್ಚಿ ತಿಳಿಸಿದರು. 

ಮಾರೂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಮಾತನಾಡಿ, ಪಟ್ಟಣದ ರೋಟರಿ ಕ್ಲಬ್‌ನವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ತಪಾಸಣೆಯಂತಹ ಸೇವಾ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದು, ನಮ್ಮ ಶಾಲಾ ಮಕ್ಕಳ ಕಣ್ಣಿನ ತಪಾಸಣೆ ಶಿಬಿರ ನಡೆಸಿ ದೃಷ್ಟಿದೋಷವುಳ್ಳ ಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ನೀಡಿದ್ದಕ್ಕಾಗಿ ಶಾಲಾ ವತಿಯಿಂದ ಕೃತಜ್ಞತೆಗಳನ್ನು ಅರ​‍್ಿಸುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ಯಾಮ ಹಂಚಾಟೆ, ರೋಟರಿಯನ್ನಗಳಾದ ಅಶೋಕ ಬಳಗಾನೂರ ಬಸವರಾಜ ಕುಂಬಾರ, ಶಿಕ್ಷಣ ಸಂಸ್ಥೆಯ ಆಡಳಿತಮಂಡಳಿಯವರು ಬೋಧಕರು ಇತರರಿದ್ದರು. 


ಸುದ್ದಿ ಓದಿ