ಯರಗಟ್ಟಿ

ಅಂಗವಿಕಲರಿಗೆ ವಿಶೇಷ ತ್ರಿಚಕ್ರ ವಾಹನ ವಿತರಣೆ

ಅಂಗವಿಕಲರಿಗೆ ವಿಶೇಷ ತ್ರಿಚಕ್ರ ವಾಹನ ವಿತರಣೆ

ಯರಗಟ್ಟಿ 07: ಅಂಗವಿಕಲರು ಎಲ್ಲರಂತೆ ಜೀವನದ ಪಯಣ ಮುನ್ನಡೆಸಬೇಕು ಎಂಬ ಉದ್ದೇಶವನ್ನಿರಿಸಿ ಅವರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಯರಗಟ್ಟಿ ಪಟ್ಟಣ ಪಂಚಾಯತ್ ವತಿಯಿಂದ 2022-23ನೇ ಸಾಲಿನ ಎಸ್‌ಎಫ್‌ಸಿ ಯೋಜನೆ ಅಡಿ ಶೇಕಡಾ 5ದರ ವಿಕಲಚೇತನ ಅರ್ಹ ಫಲಾನುಭವಿ ಅಂಗವಿಕಲರಿಗೆ ವಿಶೇಷ ತ್ರಿಚಕ್ರ ವಾಹನವನ್ನು ವಿತರಿಸಿ ಅವರು ಮಾತನಾಡಿ ದರು. ಸಾಮಾನ್ಯ ನಾಗರಿಕರಂತೆ ಅವರೂ ಬದುಕುವುದರೊಂದಿಗೆ ತಮ್ಮ ಕುಟುಂಬ ವನ್ನು ಮುನ್ನಡೆಸಲು ಈ ವಾಹನವು ಸಹಕಾರಿ ಯಾಗಲಿ ಎಂದು ಅವರು ಹಾರೈಸಿದರು. 

ತಹಶೀಲ್ದಾರ ಎಮ್‌. ಎನ್‌. ಮಠದ, ಪ. ಪಂ. ಮುಖ್ಯಾಧಿಕಾರಿ ಡಿ. ಎಸ್‌. ತಹಶೀಲ್ದಾರ, ಪ. ಪಂ. ಆರೋಗ್ಯ ನೀರಿಕ್ಷಣಾಧಿಕಾರಿ ಪಿ. ಎನ್‌. ಪಾಟೀಲ, ಪ. ಪಂ. ಕಿರಿಯ ಅಭಿಯಂತ್ರರರು ವಾಯ್‌. ಡಿ. ಕಾಮಣ್ಣವರ, ಎಸ್‌ಡಿಸಿ ಆನಂದ ಬೆಳವಿ ಕಾಂಗ್ರೇಸ್ ಮುಖಂಡರಾದ ನಿಖಿಲ ಪಾಟೀಲ, ಹನಮಂತ ಹಾರುಗೊಪ್ಪ, ಮಂಜುನಾಥ ತಡಸಲೂರ, ರಾಮನಗೌಡ ಪಾಟೀಲ, ಸಲೀಮಬೇಗ ಜಮಾದಾರ, ಫೀರೋಜ ಖಾದ್ರಿ, ಫಾರುಕ್ ಅತ್ತಾರ ಸೇರಿದಂತೆ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ