ನಗರದ ಸರಕಾರಿ ಮಾದರಿ ಶಾಲೆಯಲ್ಲಿ ಶೂ ಮತ್ತು ಸಾಕ್ಸ್ ವಿತರಣೆ
ರಾಣೇಬೆನ್ನೂರು 12: ನಗರದ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ.7 ರಲ್ಲಿ ಸರ್ಕಾರದಿಂದ ನೀಡಲ್ಪಟ್ಟಿರುವ ಶೂ ಮತ್ತು ಸಾಕ್ಷಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಅಧ್ಯಕ್ಷ ಕೃಷ್ಣಪ್ಪ ಕುರುವತ್ತಿ ಹಾಗೂ ಉಪಾಧ್ಯಕ್ಷೆ ಮಾದೇವಕ್ಕ ಕೋಣನತಂಬಿಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಕೊಡ ಮಾಡುವ ಶೂ ಮತ್ತು ಸಾಕ್ಷಗಳನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಶಾಲೆಗೆ ಬರಬೇಕು ಮತ್ತು ಅವುಗಳನ್ನು ಬಾಳಿಕೆ ಬರುವ ರೀತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು. ಒಂದನೇ ಕ್ಲಸ್ಟರ್ನ ಸಿ ಆರ್ ಪಿ ಪ್ರತಿಮಾ ದೊಡ್ಡಮನಿ ಮಾತನಾಡಿ ಮಕ್ಕಳಿಗೆ ಮತ್ತು ಎಸ್. ಡಿ.ಎಂ ಸಿ ಅಧ್ಯಕ್ಷರು ಸದಸ್ಯರುಗಳಿಗೆ ಹಾಜರಾತಿ ಹೆಚ್ಚಿಸುದು ಮತ್ತು ಸರ್ಕಾರದಿಂದ ನೀಡಲ್ಪಟ್ಟ ಸಮವಸ್ತ್ರಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಶೋಭಾ, ಶಿಕ್ಷಕರಾದ ಆರ್. ಬಸಮ್ಮ,ಜಿ.ಎಚ್. ಮಾಳಗಿಮನಿ, ಮಂಜುಳಾ ಚಕ್ರಸಾಲಿ, ಸುಮಂಗಲಾ ಕೆಂಚರೆಡ್ಡಿ, ವೈ.ಎಸ್. ಪಾಟೇಲ್, ಪೂಜಾ ಕೋಡಿಹಳ್ಳಿ, ಅಶೋಕ್ ಪಾಸಿಗಾರ್, ನೀಲಪ್ಪ ಕಸವಾಳ, ಲಕ್ಷ್ಮವ್ವ ಮಾಯಣ್ಣವರ, ಕಾಕೋಳ ಲಕ್ಷ್ಮೀ,ನಾಗರಾಜ್ ಕನವಳ್ಳಿ, ಗಣೇಶ್ ರುದ್ರಪ್ಪ ಮಾಳಗಿ, ಪ್ರೇಮಾ ಬೀರಪ್ಪ ದೇವರಗುಡ್ಡ, ಮಂಗಳಾ ಕೊಟ್ರೇಶ್ ಕುದುರಿಹಾಳ, ಪರಮೇಶ್ ಕರಿಯಪ್ಪ ಕರಿಹಿಂಡೇರ, ನೇತ್ರಾವತಿ ಗಂಗಾಧರ್ ಪವಾರ, ರೇಖಾ ಮಾರಪ್ಪ ಹೊಸಮನಿ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು .ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.. ನಂತರ ನಡೆದ ಸಾಂಸ್ಕೃತಿಕಛಿ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆ ಮೆರೆದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಎಸ್ ಡಿ ಎಂ ಸಿ ಸದಸ್ಯರು ಬಹುಮಾನವನ್ನು ವಿತರಿಸಿ, ಗೌರವಿಸಿ ಅಭಿನಂದಿಸಿದರು ಕವಿತಾ ಸಂಗಡಿಗರು ಪ್ರಾರ್ಥಿಸಿದರು ಪ್ರಧಾನ ಗುರುಎಂ.ಬಿ. ಗುರಪ್ಪನವರ ಸ್ವಾಗತಿಸಿ, ದೈಹಿಕ ಶಿಕ್ಷಕ ಜೆ.ಜಿ.ಗವೇನವರ ನಿರೂಪಿಸಿ. ಎಸ್ ಸುಧೀಂದ್ರ ವಂದಿಸಿದರು.