ಸಾಮಾಜಿಕ ಅರಣ್ಯ ಇಲಾಖೆಯಿಂದ ರೈತರಿಗೆ ಸಸಿ ವಿತರಣೆ
ಇಂಡಿ 04: ತಾಲೂಕಿನ ರೈತರಿಗೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ 80ಸಾವಿರ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ 70ಸಾವಿರ ಸಸಿ ವಿತರಿಸಲಾಗುವದೆಂದು ವಲಯ ಅರಣ್ಯ ಅಧಿಕಾರಿ ಪ್ರಭುಲಿಂಗ ಭ್ಯೂಯ್ಯಾರ ಮತ್ತು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕಾಂತರಾಜ ಚವ್ಹಾಣ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈಗಾಗಲೇ ಜೂನ್ 1ರಿಂದ ಸಸಿ ನೀಡಲು ಪ್ರಾರಂಭಿಸಿದ್ದು ರೈತರು ಉತಾರೆ ಮತ್ತು ಆಧಾರ ಕಾರ್ಡು ತರಬೇಕು.
ಪ್ರಾದೇಶಿಕ ವಲಯದ ಜೇವೂರ ನರ್ಸರಿಯಲ್ಲಿ ಒಬ್ಬ ರೈತರಿಗೆ ಶ್ರೀಗಂಧ ಬೇಕಾದರೆ 200ಸಸಿ ಇಲ್ಲವೆ ಬೇರೆಯಾದರೆ 400ಸಸಿ ನೀಡಲಾಗುವದೆಂದರು.
ಶ್ರೀಗಂಧ, ಮಹಾಗನಿ, ಹೆಬ್ಬೇವು, ಕರಿಬೇವು, ಬೇವಿನಗಿಡ, ನಿಂಬೆ, ಸೀತಾಫಲ ಸೇರಿದಂತೆ ಇನ್ನಿತರ ಸಸಿ ಲಭ್ಯವಿದೆ ಎಂದರು.
ಬಬಲಾದ ನರ್ಸರಿಯಲ್ಲಿ ಸಾಮಾಜಿಕ ಅರಣ್ಯದಿಂದ ನುಗ್ಗೆ, ಹುಣಸೆ, ಪೇರಲ, ಕರಿಬೇವು, ಹೆಬ್ಬೇವು, ಅದಲ್ಲದೆ ಅರಣ್ಯಿಕರಣಕ್ಕೆ ರಸ್ತೆ ಬದಿ ಮತ್ತು ಬ್ಲಾಕ್ ಗಳಲ್ಲಿ 20000 ಮತ್ತು ಶಾಲಾ ಕಾಲೇಜುಗಳಲ್ಲಿ 5000 ಸಸಿ ಬೆಳೆಸಲಾಗುವದೆಂದರು. ಅಂಜುಟಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಈಗಾಗಲೇ 8000 ಗಿಡಗಳು ನಿರ್ವಹಣೆಯಲ್ಲಿದ್ದು ಸದರಿ ವರ್ಷದಲ್ಲಿ 4200 ಗಿಡಗಳನ್ನು ನೆಡುತ್ತಿದ್ದು ಮಳೆಗಾಗಿ ಕಾಯುತ್ತಿದ್ದೇವೆ. ಉತ್ತಮವಾಗಿ ಮಳೆ ಆಗುವ ನೀರೀಕ್ಷೆ ಇದೆ ಎಂದು ಕಾಂತರಾಜ ಚವ್ಹಾಣ ತಿಳಿಸಿದ್ದಾರೆ.