ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ
ಶಿಗ್ಗಾವಿ 02ಃ ತಾಲೂಕಿನಲ್ಲಿ ಕೊರೊನಾ ಸೊಂಕನ್ನು ತಡೆಗಟ್ಟುಲ್ಲಿ ತಮ್ಮ ಜೀವದ ಹಂಗನ್ನು ತೊರೆದು, ಲಾಕಡೌನ್ ಇದ್ದರು ಸಹ ವರದಿ ಮಾಡುತ್ತಿರುವ ವರದಿಗಾರ ಕಾರ್ಯ ಶ್ಲಾಘನಿಯವಾಗಿದೆ ಎಂದು ಯುವ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂತೋಷ ಚಾಕಲಬ್ಬಿ ಹೇಳಿದರು.
ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಯುವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರು ಇಂದು ಅಪಾಯದ ಸನ್ನಿವೇಶದಲ್ಲಿಯೂ ತಮ್ಮ ವೃತ್ತಿಧರ್ಮ ಮಾಡುತ್ತಿರುವದು, ಮತ್ತು ಬದಲಾಗುತ್ತಿರುವ ಸನ್ನಿವೇಶಗಳ ಬಗ್ಗೆ ಜನತೆಗೆ ಮುಟ್ಟಿಸಿ ಜಾಗೃತಗೊಳಿಸುತ್ತಿರುವ ಕಾರ್ಯ ಮೆಚ್ಚುವಂತದ್ದು, ಸರ್ಕಾರ ಇವರನ್ನು ಗುರುತಿಸಿ ಇವರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಶಿಗ್ಗಾವಿ ಶಹರ ಘಟಕದ ಅಧ್ಯಕ್ಷ ಆಶೀಫ್ ಕಣವಿ, ಸವಣೂರ ತಾಲೂಕಾ ಅಧ್ಯಕ್ಷ ಎಮ್ ಕೆ ತಾಳಿಕೋಟಿ, ಪದಾಧಿಕಾರಿಗಳಾದ ಕಾಂತೇಶ ವಿಜಾಪೂರ, ಮಹೇಶ ಮಸಳಿ, ರಾಮನಗೌಡ ಪಾಟೀಲ್, ಅಲ್ತಾಫ್ ಹುಳ್ಳಿಕೋಪ್ಪಿ, ಡಿಎಸ್ಎಸ್ ತಾಲೂಕಾ ಅಧ್ಯಕ್ಷ ಹನಮಂತಪ್ಪ ಮಾದರ, ಜೀವಿಕ ಜಿಲ್ಲಾ ಸಂಚಾಲಕ ಸುರೇಶಣ್ಣ ಹರಿಜನ ಸೇರಿದಂತೆ ವರದಿಗಾರರು ಇದ್ದರು.