ಗ್ರಾಪಂ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ
ಶಿಗ್ಗಾವಿ 16: ಬಡವರ ನೆರವಾಗಿ, ನಿರಂತರ ಸಮಾಜ ಸೇವೆ ಮಾಡುವದೇ ಸಿ ಬಿ ಯಲಿಗಾರ ಸೇವಾ ಟ್ರಷ್ಟನ ಮುಖ್ಯ ಧ್ಯೇಯವಾಗಿದೆ ಎಂದು ಸಿ ಬಿ ಯಲಿಗಾರ ಸೇವಾ ಟ್ರಷ್ಟನ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ತಾಲೂಕಿನ ಹೊಸೂರ ಗ್ರಾಮದಲ್ಲಿ ಸಿ ಬಿ ಯಲಿಗಾರ ಸೇವಾ ಟ್ರಷ್ಟ ವತಿಯಿಂದ ಸಂಕಷ್ಟದಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಕಂದಾಯ, ಗ್ರಾಪಂ ಸಿಬ್ಬಂದಿಗೆ ಹಾಗೂ ಕೊರೊನಾ ಸೋಂಕಿನಿಂದ ಗುಣಮುಖರಾದ ಕುಟುಂಬಗಳಿಗೆ ಹಮ್ಮಿಕೊಂಡ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿಗೆ ತುತ್ತಾಗಿ ಅದರಿಂದ ಪಾರಾಗಿ ಬಂದು ಅದನ್ನೆ ಪ್ರೇರಣೆಯಾಗಿ ಮಾಡಿಕೊಂಡು ನಮ್ಮ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ ಒಂದು ವರ್ಷದಿಂದ ಹಲವಾರು ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ, ನಮ್ಮ ಸಂಸ್ಥೆ ಇಂದು ಬಡವರಿಗೆ ನೆರವಾಗಿ ನಿಂತಿದೆ ಮತ್ತು ಅವರ ಕಷ್ಟಕ್ಕೆ ಸದಾ ಸ್ಪಂದಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಕಂದಾಯ ಸಿಬ್ಬಂದಿಗೆ ಹಾಗೂ ಗ್ರಾಪಂ ಸಿಬ್ಬಂದಿಗೆ ಸೇರಿದಂತೆ 100 ಕ್ಕೂ ಹೆಚ್ಚು ದಿನಸಿ ಕಿಟ್ಗಳನ್ನು ವಿತರಿಸಿ ಅಲ್ಲಿನ ವೈಧ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಉಪಾಧ್ಯಕ್ಷೆ ಚನ್ನಮ್ಮ ಪಾಟೀಲ್, ಸದಸ್ಯರಾದ ನಾಗರಾಜ ಸೂರಗೊಂಡ, ಧರ್ಮಣ್ಣ ಡವಗಿ, ನಿತ್ಯಾನಂದ ಬರದೂರ, ಅನಂತಪ್ಪ ಛಬ್ಬಿ, ಅರುಣ ಇಂದೂರ, ಧರಣೆಂದ್ರ್ಪ ಪುಟ್ಟಣ್ಣವರ, ಯಲ್ಲಪ್ಪ ಹರಿಜನ, ಚನ್ನಪ್ಪ ಹರಿಜನ, ಶಂಕರಗೌಡ ಪಾಟೀಲ್, ಸುಧೀರ ಛಬ್ಬಿ ಸೇರಿಂದತೆ ಗ್ರಾಮದ ಹಿರಿಯರು, ಶಶಿಧರ ಯಲಿಗಾರ ಅಭಿಮಾನಿ ಬಳಗದವರು ಇದ್ದರು.