ಶಿಗ್ಗಾವ್

ಮೋಚಿಗಾರ ಸಮಾಜ ಬಾಂಧವರಿಗೆ ದಿನಸಿ ಕಿಟ್ ವಿತರಣೆ

ಮೋಚಿಗಾರ ಸಮಾಜ ಬಾಂಧವರಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ 14:  ಮೋಚಿಗಾರ ಸಮಾಜ ಸ್ವಾಭಿಮಾನದಿಂದ ಬದುಕುವ ಸಮಾಜ, ಈ ಸಮಾಜದವರಿಗೆ ಗುಡಿ ಕೈಗಾರಿಯಲ್ಲಿ ಸಂಪಾದನೆ ಮಾಡಲು ವ್ಯವಸ್ಥೆ ಮಾಡಲಾಗುವದು, ಧಾರವಾಡದಲ್ಲಿ ಟೈಲರಿಂಗ್ ಅಂಗಡಿ ತೆರೆದು ಸುಮಾರು 300 ಜನಕ್ಕೆ ಉದ್ಯೋಗ ಒದಗಿಸಲಾಗುವದು ಸಿ ಬಿ ಯಲಿಗಾರ ಸೇವಾ ಟ್ರಷ್ಟನ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.ಪಟ್ಟಣದ ಹಳೆಯ ತಹಶೀಲ್ದಾರ ಕಾಯರ್ಾಲಯದ ಮುಂಭಾಗದಲ್ಲಿ  ಸಿ ಬಿ ಯಲಿಗಾರ ಸೇವಾ ಟ್ರಸ್ಟ್ ವತಿಯಿಂದ ಮೋಚಿಗಾರ ಸಮಾಜದ ಬಾಂಧವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದ ಅವರು, ಕೊರೋನಾ ಸೊಂಕಿಗೆ ತುತ್ತಾಗಿ ಅದರಿಂದ ಪಾರಾಗಿ ಬಂದು ಅದನ್ನೆ ಪ್ರೇರಣೆಯಾಗಿ ಮಾಡಿಕೊಂಡು ನಮ್ಮ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ ಒಂದು ವರ್ಷದಿಂದ ಹಲವಾರು ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ, ನಮ್ಮ ಸಂಸ್ಥೆ ಇಂದು ಮೋಚಿಗಾರ ಸಮಾಜದವರಿಗೆ  ನೆರವಾಗಿ ನಿಂತಿದೆ ಮತ್ತು ಅವರ ಕಷ್ಟಕ್ಕೆ ಸದಾ ಸ್ಪಂದಿಸುತ್ತದೆ ಎಂದರು.

ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಮಾತನಾಡಿ ಲಾಕ್ ಡೌನ್ ಸಂದರ್ಭದಲ್ಲಿ ದಿನಸಿ ಸಾಮಗ್ರಿಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿರುವ ಸಮೂದಾಯಗಳಿಗೆ ಸಹಾಯ ಮಾಡಲು ಧಾನಿಗಳನ್ನು ಕೇಳಿದಾಗ ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಅವರು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ ಅವರಿಗೆ ತಾಲೂಕಾ ಆಡಳಿತ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೆವೆ ಎಂದರು.

ರೈತಧ್ವನಿ ಚಾನೆಲ್ ಸಂಸ್ಥಾಪಕ ಬಸವರಾಜ ಕುರಗೋಡಿ ಮಾತನಾಡಿ, ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ  ಅವರ ಕಷ್ಟವನ್ನು ಗುರುತಿಸಿ ಸಿ ಬಿ ಯಲಿಗಾರ ಸೇವಾ ಟ್ರಸ್ಟ್ ಅವರಿಗೆ ನೆರವಾಗುತ್ತಿದೆ ಮತ್ತು ಇವರ ಸೇವೆಗೆ ಸಿ ಬಿ ಯಲಿಗಾರ ಸೇವಾ ಟ್ರಷ್ಟ ಸದಾ ಸಿದ್ದವಿರುತ್ತದೆ ಎಂದರು.ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಮುಖಂಡ ರಾಜು ಕೆಂಬಾವಿ ಮಾತನಾಡಿದರು, ಮಂಜಪ್ಪ ಧಾರವಾಡ, ಮಲ್ಲೇಶಪ್ಪ ಧಾರವಾಡ, ಮಂಜು ಚಪ್ಪರಮನಿ ಸೇರಿದಂತೆ ತಹಶೀಲ್ದಾರ ಕಾಯರ್ಾಲಯದ ಅಧಿಕಾರಿಗಳು ಸಿಬ್ಬಂದಿಗಳು, ಶಶಿಧರ ಯಲಿಗಾರ ಅಭಿಮಾನಿ ಭಳಗದವರು ಇದ್ದರು 

ಸುದ್ದಿ ಓದಿ