ಶಿಗ್ಗಾವ್

ಸೋಂಕಿನಿಂದ ಗುಣಮುಖರಾದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಸೋಂಕಿನಿಂದ ಗುಣಮುಖರಾದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ 16: ತಾಲೂಕಿನ ಹೊಸೂರ ಗ್ರಾಮದಲ್ಲಿ ಸಿ ಬಿ ಯಲಿಗಾರ ಸೇವಾ ಟ್ರಸ್ಟ್‌ ವತಿಯಿಂದ ಸಂಕಷ್ಟದಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ, ಕಂದಾಯ, ಗ್ರಾಪಂ ಸಿಬ್ಬಂದಿಗೆ ಹಾಗೂ ಕೊರೊನಾ ಸೋಂಕಿನಿಂದ ಗುಣಮುಖರಾದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ ಸಿ ಬಿ ಯಲಿಗಾರ ಸೇವಾ ಟ್ರಷ್ಟನ ಸಂಸ್ಥಾಪಕ ಅಧ್ಯಕ್ಷ ಶಶಿಧರ ಯಲಿಗಾರ ಅವರನ್ನು ಗ್ರಾಮ ಪಂಚಾಯತಿಯವರು ಹಾಗೂ ಗ್ರಾಮದ ಹಿರಿಯರು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಉಪಾಧ್ಯಕ್ಷೆ ಚನ್ನಮ್ಮ ಪಾಟೀಲ್, ಸದಸ್ಯರಾದ ನಾಗರಾಜ ಸೂರಗೊಂಡ, ಧರ್ಮಣ್ಣ ಡವಗಿ, ನಿತ್ಯಾನಂದ ಬರದೂರ, ಅನಂತಪ್ಪ ಛಬ್ಬಿ, ಅರುಣ ಇಂದೂರ, ಧರಣೆಂದ್ರ​‍್ಪ ಪುಟ್ಟಣ್ಣವರ, ಯಲ್ಲಪ್ಪ ಹರಿಜನ, ಚನ್ನಪ್ಪ ಹರಿಜನ, ಶಂಕರಗೌಡ ಪಾಟೀಲ್, ಸುಧೀರ ಛಬ್ಬಿ ಸೇರಿಂದತೆ ಗ್ರಾಮದ ಹಿರಿಯರು, ಶಶಿಧರ ಯಲಿಗಾರ ಅಭಿಮಾನಿ ಭಳಗದವರು ಇದ್ದರು. 


ಸುದ್ದಿ ಓದಿ