ಉಚಿತವಾಗಿ ಹಣ್ಣು-ಹಂಪಲ ವಿತರಣೆ
ಇಂಡಿ24: ಇಂಡಿ ತಾಲೂಕಿನ ಕರವೇ ತಾಲೂಕಾಧ್ಯಕ್ಷ ಬಾಳು ಮುಳಜಿ ಅವರ ಜನ್ಮದಿನಾಚರಣೆ ಪ್ರಯುಕ್ತ ಇಂಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಕರವೇ ಬಳಗದ ವತಿಯಿಂದ ಉಚಿತವಾಗಿ ಹಣ್ಣು-ಹಂಪಲನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹೇಶ ಹೂಗಾರ, ಸುನಿಲ್ ಹಿರೇಮಠ, ಸಚೀನ ನಾವಿ, ಬಿಮು ನಾಗರಹಳಿ, ಅರುಣ್ ಕಂಬಾರ, ಗಂಗೂ ನಾಯ್ಕೋಡಿ, ಅವದುತ ಬಿರಾದಾರ, ಯಮುನು ಕೂಡಿಗನೂರ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.