ಬೈಲಹೊಂಗಲ

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಲೋಕದರ್ಶನ ವರದಿ 


ಬೈಲಹೊಂಗಲ 08: ವಿಶ್ವ ಆರೋಗ್ಯ ದಿನ ಹಾಗೂ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನದ ಪ್ರಯುಕ್ತ ಭಾಜಪ ಬೈಲಹೊಂಗಲ ಮಂಡಲ ಹಾಗೂ ವೈದ್ಯಕೀಯ ಪ್ರಕೋಷ್ಠ ಬೆಳಗಾವಿ ಗ್ರಾಮಾಂತರ ಜಿಲ್ಲೆ ವತಿಯಿಂದ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. 

       ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್, ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಹಸಂಚಾಲಕ ಗುರು ಕೋತಿನ್, ಡಾ.ಬಿ ಸಿ ಸಣ್ಣಕ್ಕಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರ್ಗಿ, ಜಿಲ್ಲಾ ಓಬಿಸಿ ಮೋರ್ಚಾ ಉಪಾಧ್ಯಕ್ಷ ಸಂತೋಷ್ ಹಡಪದ್, ಜಿಲ್ಲಾ ಯುವ ಮೋರ್ಚಾ ಕೋಶಾಧ್ಯಕ್ಷ ಸಚಿನ್ ಖಡಿ,  ಬಸವರಾಜ ಗುರಣ್ಣವರ, ಸಿ ಎಸ್ ರಾಚನ್ನವರ, ಮಡಿವಾಳಪ್ಪ ಬಡ್ಲಿ, ಗೌಡಪ್ಪ ಪಾಟೀಲ್, ಈರ​‍್ಪ ಹುಬ್ಬಳ್ಳಿ, ಮಂಜು ಸಾಣಿಕೊಪ್ಪ, ಮಡಿವಾಳಪ್ಪ ಬುದಗೊಪ್ಪನವರ್, ಮಂಜುನಾಥ್ ಹುಗ್ಗಿ,  ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಆಶಾ ಕಸಮಳಗಿ , ರೂಪಾ ಜಮಖಂಡಿ ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ