ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ
ಶಿಗ್ಗಾವಿ 20: ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾರ್ಮಿಕರ ಒಕ್ಕೂಟ ಹಾವೇರಿ ಸಂಸ್ಥೆಗೆ ಕೊರೊನಾ ಎರಡನೆಯ ಅಲೆಯಲ್ಲಿ ಜಿಲ್ಲೆಯ ಸುಮಾರು ಸಾವಿರ ಜೀತದಾಳು ಮತ್ತು ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದ ತಾಲೂಕಿನ ಗಂಗೀಭಾವಿಯ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶಶೀಧರ ಯಲಿಗಾರರಿಗೆ ಜೀವೀಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಆಭಿನಂದಿಸಿಲಾಯಿತು.
ಈ ಸಂದರ್ಭದಲ್ಲಿ ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ, ತಾಲೂಕ ಕುರುಬ ಸಮಾಜ ಅಧ್ಯಕ್ಷ ಪಕ್ಕೀರ್ಪ ಕುಂದೂರ, ಮುಖಂಡ ಮಂಜುನಾಥ ಕಂಕಣವಾಡ, ಮಹ್ಮಗೌಸ ಅಗಸನಮಟ್ಟಿ, ಮೌಲಾಲಿ ಶೇಕಲ್ಲಿ, ಶೇಖರ ಲಮಾಣಿ, ಸಾಧಿಕ ಅಂಬೂರ, ಶಂಕರ ಮಮದಾಪೂರ, ಪರುಶರಾಮ ಇಳಗೇರ, ಸೈಯಧ್ ಹಪೀಝ್, ಪಾತಿಮಾಬೀ ಮುಲ್ಲಾನವರ ಸೇರಿದಂತ ೆಜೀವಿಕ ಸದಸ್ಯರು ಉಪಸ್ಥಿತರಿದ್ದರು.