ಕಾರವಾರ

ರೋಟರಿ ಕ್ಲಬ್‌ನಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ರೋಟರಿ ಕ್ಲಬ್‌ನಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಕಾರವಾರ 13:  ಪ್ರಸ್ತುತ ವರ್ಷದ ಅಧ್ಯಕ್ಷರಾದ ರೋ. ನರೇಂದ್ರ ದೇಸಾಯಿ ರವರು ಕಾರವಾರ ತಾಲೂಕಿನ ಅತೀ ಬಡತನದಲ್ಲಿ ಇರುವವರಿಗಾಗಿ “ರೋಟರಿ ಗರೀಬ ಕಲ್ಯಾಣ ಯೋಜನೆ” ಎನ್ನುವ ಯೋಜನೆಯೊಂದನ್ನು ರೂಪಿಸಿಕೊಂಡು ತಮ್ಮ ಅವಧಿಯುದ್ದಕ್ಕೂ ಬಡವರಿಗಾಗಿ ಆಹಾರ ಪದಾರ್ಥಗಳನ್ನು ವಿತರಿಸುವುದು, ಬಟ್ಟೆಗಳನ್ನು ನೀಡುವುದು, ಅವಶ್ಯಕತೆ ಇದ್ದವರಿಗೆ ಮನೆ ರಿಪೇರಿ ಮಾಡಿಸಿಕೊಡುವುದು ಹೇಗೆ ಬಡವರಿಗೆ ಸಹಾಯವಾಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ.  ಪ್ರಾರಂಭದಲ್ಲಿ ಇಂದು ಕೊಂಕಣ ಖಾರ್ವಿವಾಡಾದ ಅತ್ಯಂತ ಕಡುಬಡತನದಲ್ಲಿದ್ದ 19 ಜನರನ್ನು ಆರಿಸಿ ಅವರಿಗೆ ಆಹಾರ  ಪದಾರ್ಥಗಳ ಒಂದು ಕಿಟ್ ವಿತರಿಸಿದರು.  ಸದ್ರಿ ಕಿಟ್‌ಗಳಲ್ಲಿ 2ಕೇ.ಜಿ. ಸಕ್ಕರೆ, ಅರ್ದ ಕೇ.ಜಿ. ಚಾಪುಡಿ, 5 ಕೇ.ಜಿ. ಅಕ್ಕಿ, 1ಕೇ.ಜಿ. ತೊಗರಿಬೆಳೆ, 1ಕೇ.ಜಿ. ಅವಲಕ್ಕಿ, 5 ಕೇ.ಜಿ. ಗೋದಿ ಹಿಟ್ಟು, 3 ಕೇ.ಜಿ. ಉಳ್ಳಾಗಡ್ಡೆ, 3 ಕೇ.ಜಿ. ಬಟಾಟೆ, 1ಕೇ.ಜಿ. ರವಾ ಇವುಗಳೆಲ್ಲ ಇರುತ್ತದೆ.   

ರೋಟರಿ ಶತಾಬ್ಧಿ ಭವನದ ಒಂದು ಸರಳ ಸಮಾರಂಭದಲ್ಲಿ ಈ ಕಿಟ್ಟಗಳನ್ನು ವಿತರಿಸಲಾಯಿತು.  ಅಧ್ಯಕ್ಷ ರೋ. ನರೇಂದ್ರ ದೇಸಾಯಿ ಎಲ್ಲರನ್ನು ಸ್ವಾಗತಿಸುತ್ತ “ನಮ್ಮ ರೋಟರಿ ಸಂಸ್ಥೆಯಿಂದ ನಮ್ಮ ನಗರ ಹಾಗೂ ತಾಲೂಕಿನ ಬಡವರಿಗೆ ನಮ್ಮಿಂದ ಎಷ್ಟು ಸಹಾಯಮಾಡಲು ಸಾಧ್ಯವಿದೆಯೋ ಅಷ್ಟು ಸಹಾಯ ಮಾಡಲು ನಾವು ಸಿದ್ದರಿದ್ದೇವೆ, ತಮ್ಮೆಲ್ಲರ ಸಹಕಾರ ನಮಗೆ ಬೇಕು” ಎಂದರು. ಕಾಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿರುವ ರೋಶನಿ ಮಾಳಸೇಕರ ಮಾತನಾಡುತ್ತ “ರೋಟರಿ ಸಂಸ್ಥೆಯು ಬಡವರಿಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ, ಅದರಲ್ಲಿಯೂ ನನ್ನ ವಾರ್ಡಿನಿಂದಲೇ ಪ್ರಾರಂಭ ಮಾಡಿದ್ದು ನನಗೆ ತುಂಬಾ ಸಂತೋಷವಾಗಿದೆ, ರೋಟರಿ ಸಂಸ್ಥೆಗೆ ಸದಾ ನಮ್ಮ ಸಹಕಾರ ಇರುತ್ತದೆ” ಎಂದರು. ವೇದಿಕೆಯಲ್ಲಿ ರೋಟರಿ ಸಮುದಾಯ ಸೇವಾ ನಿರ್ದೇಶಕ ರೋ. ರಾಮಚಂದ್ರ ಪಡವಳಕರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸದಸ್ಯರಾದ ರೋ. ಕೆ. ಡಿ. ಪೆಡ್ನೇಕರ, ರೋ. ಪ್ರಸನ್ನ ತೆಂಡೂಲ್ಕರ, ರೋ. ಸುರಜ ಗಾಂವಕರ, ರೋ. ನಾಗರಾಜ ಜೋಶಿ, ರೋ. ರಾಘವೇಂದ್ರ ಪ್ರಭು, ರೋ. ಮಾರುತಿ ಪಿ. ಕಾಮತ, ರೋ. ಸಾತಪ್ಪಾ ತಾಂಡೇಲ, ರೋ. ರಾಮಚಂದ್ರ ಪಡವಳಕರ, ರೋ. ಗುರುದತ್ತ ಬಂಟ, ರೋ. ಗುರು ಹೆಗಡೆ, ಇನ್‌ರ್‌ವ್ಹೀಲ್ ಸಂಸ್ಥೆಯ ಸುಜಾತಾ ಜೋಶಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೇಯಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ. ಮೋಹನ ಎಲ್‌.ನಾಯ್ಕ ಅಭಿನಂದಿಸಿದರು, ಕಾರ್ಯಕ್ರಮವನ್ನು ರೋ. ಎಲ್‌.ಎಸ್‌.ಫರ್ನಾಂಡಿಸ್ ನಡೆಸಿಕೊಟ್ಟರು. 


ಸುದ್ದಿ ಓದಿ