ಕಾರವಾರ

ಪರಿಹಾರ ಚೆಕ್ ವಿತರಣೆ

ಪರಿಹಾರ ಚೆಕ್ ವಿತರಣೆ

ಮುಂಡಗೋಡ 26: ರೈತ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಿಯಾದ ಪರಿಹಾರ ಚೆಕ್‌ನ್ನು ಶುಕ್ರವಾರ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪಲಾನುಭವಿಗಳ ಕುಟುಂಬಸ್ಥರಿಗೆ ವಿತರಿಸಿದರು. 

ರೈತ ಆತ್ಮಹತ್ಯೆ ಪ್ರಕರಣದಲ್ಲಿ ತಾಲೂಕಿನ ತೊಗರಳ್ಳಿ ಗ್ರಾಮದ ಜಯಾ ಪ್ರಭಾಕರ ಕೊರ್ಶಿ ಅವರಿಗೆ 5 ಲಕ್ಷ, ಆಕಸ್ಮಿಕ ಮರಣ ಹೊಂದಿದ ಪ್ರಕರಣದಲ್ಲಿ ನಾಗರತ್ನ ಈರನಗೌಡ ಪಾಟೀಲ ಅವರಿಗೆ 2 ಲಕ್ಷ ಹಾಗೂ ನಂದಿಕಟ್ಟಾ ಗ್ರಾಮದ ಖೈರುನಿಸಾ ಶೌಕತ್ ತಡಸದ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಿಯಾದ 1 ಲಕ್ಷ ರೂಪಾಯಿ ಚೆಕ್‌ನ್ನು ವಿತರಿಸಲಾಯಿತು. 


ಸುದ್ದಿ ಓದಿ