ಬಸಪ್ಪಗೆ ಶಾಸಕ ಸೋಮನಗೌಡ ಪರಿಹಾರದ ಚೆಕ್ ವಿತರಣೆ
ತಾಳಿಕೋಟಿ : ದೇ.ಹಿಪ್ಪರಗಿ ಮತಕ್ಷೇತ್ರದ ಶಳ್ಳಗಿ ಗ್ರಾಮದ ಬಸಪ್ಪ ರಾಮಪ್ಪ ನಾಯ್ಕೋಡಿ ಎಂಬುವವರ ಕುರಿಗಳು ಮಳೆಯ ಪ್ರವಾಹಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಕ್ಕಾಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಪರಿಹಾರದ ಚೆಕ್ನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ತಹಶೀಲ್ದಾರ ಶ್ರೀಧರ ಗೋಟೂರ, ಪಕ್ಷದ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಅಸ್ಕಿ, ಶಂಕರಗೌಡ ದೇಸಾಯಿ, ಗುರುಗೌಡ ಗುರಡ್ಡಿ, ಸೋಮನಗೌಡ ಹಾದಿಮನಿ, ರಾಜುಸಹುಕಾರ ಬಿರಾದಾರ, ಗ್ರಾಮದ ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.