ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲ ವಿತರಣೆ
ಯರಗಟ್ಟಿ 27: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಅಂಗವಾಗಿ ಸಮುದಾಯ ಕೇಂದ್ರದಲ್ಲಿ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲ ವಿತರಿಸಲಾಯಿತು. ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಸ್ಥಳಿಯ ಸರಕಾರಿ ಸಮುದಾಯ ಕೇಂದ್ರದಲ್ಲಿ ರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲ ವಿತರಿಸಿದರು. ಇದೇ ಸಂದರ್ಭದಲ್ಲಿ ಗುಜರಾತದ ಗಾಂಧಿನಗರದಿಂದ ಹೊರಟು ದೇಶಾದ್ಯಂತ ಸೈಕಲ್ ಮೇಲೆ ಸಂಚರಿಸುತ್ತ ಪ್ಲಾಸ್ಟಿಕ್ ದುಷ್ಪರಿಣಾಮಗಳ ಜಾಗೃತಿ ಮೂಡಿಸುತ್ತಿರುವ ರಾಜೇಶ ಶರ್ಮಾ ಅವರನ್ನು ಸ್ವಾಗತಿಸಲಾಯಿತು. ಬಿಜೆಪಿ ತಾಲೂಕಾ ಅಧ್ಯಕ್ಷ ಈರಣ್ಣ ಚಂದರಗಿ, ವೆಂಕಟೇಶ ದೇವರಡ್ಡಿ, ಆರ್.ಪಿ.ಐ. ತಾವರೆಪ್ಪಾ, ಪಿ.ಎಸ್.ಐ.ಹಿರೇಗೌಡರ, ಎ.ಎಸ್.ಐ. ವೈ.ಎಂ.ಕಡಕೊಳ, ಚೇತನ ಜಕಾತಿ, ಸದಾನಂದ ಪಾಟೀಲ, ಬಸವರಾಜ ದಾನ್ನನವರ, ಈರಣ್ಣಾ ಪೂಜೇರ ಸೋಮು ರೈನಾಪುರ, ಫಿರೋಜ ಖಾದ್ರಿ ಇತರರಿದ್ದರು.