ಕಾರವಾರ

ಕಾರ್ಮಿಕರಿಗೆ ಮಂಜೂರಾಗಿರುವ ಅಪಘಾತ ಪರಿಹಾರ ಧನ ವಿತರಣೆ

ಕಾರ್ಮಿಕರಿಗೆ ಮಂಜೂರಾಗಿರುವ ಅಪಘಾತ ಪರಿಹಾರ ಧನ ವಿತರಣೆ

ಕಾರವಾರ : ಕೋವಿಡ್ 19 ಕರೋನಾ ವಾರಿಯರ್ಸ್‌ಗಳಿಗೆ ಸನ್ಮಾನ ಹಾಗೂ  ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ಮಂಜೂರಾಗಿರುವ ಅಪಘಾತ ಪರಿಹಾರ ಧನ ಮತ್ತು ವೈಧ್ಯಕೀಯ ಹಾಗೂ ಧನ ಸಹಾಯದ ಚೆಕ್ ವಿತರಣೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾಡಿದರು. 75 ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲೇ ಪರಿಹಾರ ವಿತರಣೆ ನಡೆಯಿತು. ಶಾಸಕಿ ರೂಪಾಲಿ ನಾಯ್ಕ,  ನಗರಸಭೆ ಅಧ್ಯಕ್ಷ ಡಾ. ನಿತಿನ ಪಿಕಳೆ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಗಾ ಎಂ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್‌. ಕೆ. ಎಸಿ ವಿದ್ಯಾಶ್ರಿ ಚಂದರಗಿ ಸೇರಿದಂತೆ  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ