ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಣೆ
ಶಿಗ್ಗಾವಿ 10 : ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಶಿಗ್ಗಾವಿ ಪಟ್ಟಣದ ಎಲ್ಲ 23 ವಾರ್ಡ್ಗಳಲ್ಲಿಯೂ ಮನೆ ಮನೆಗೂ ತಲುಪಿಸಲಾಯಿತು.
ಪಟ್ಟಣದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು ಸ್ವಯಂಪ್ರೇರಿತರಾಗಿ ಪಕ್ಷಭೇದ ಮೆರೆತು ಪ್ರತಿ ಮನೆ ಮನೆಗೂ ತೆರಳಿ ಮಂತ್ರಾಕ್ಷತೆ ತಲುಪಿಸುವದು ಕಂಡು ಬಂತು, ಇದಕ್ಕೂ ಪೂರ್ವದಲ್ಲಿ ಪ್ರತಿ ವಾರ್ಡ್ಗಳಲ್ಲಿಯೂ ದೇವಸ್ಥಾನಗಳಲ್ಲಿ ಮಂತ್ರಾಕ್ಷತೆ ಹಾಗೂ ರಾಮ ಮಂದಿರದ ಫೋಟೊ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು, ಪಟ್ಟಣದ ಜನತೆ ತಮ್ಮ ಮನೆಗೆ ಬಂದ ಮಂತ್ರಾಕ್ಷತೆಯನ್ನು ಭಕ್ತಿ ಭಾವದಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ಮಾಜಿ ಪುರಸಭೆ ಸದಸ್ಯ ಶಿವಣ್ಣಾ ಗಂಜೀಗಟ್ಟಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂ ಕಾರ್ಯಕರ್ತರಿಗೆ ಆರತಿ ಬೆಳಗಿ, ಶರಬತ್ ನೀಡಿ ಸ್ವಾಗತ :
ಪಟ್ಟಣದ 23 ವಾರ್ಡಗಳಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮನೆ ಮನೆಗೂ ತಲುಪಿಸಲು ಆಗಮಿಸಿದಾಗ ಮಹಿಳೆಯರು ಕಾರ್ಯಕರ್ತರನ್ನ ಆರತಿ ಬೆಳಗಿ ಆತ್ಮೀಯವಾಗಿ ಭರಮಾಡಿಕೊಂಡು, ಶರಬತ್ ನೀಡಿದ್ದು ವಿಶೇಷವಾಗಿತ್ತು.