ಮಕ್ಕಳಿಗೆ ಉಚಿತ ನೋಟ್ಪುಸ್ತಕ ವಿತರಣೆ
ಲೋಕದರ್ಶನ ವರದಿ
ಶಿಗ್ಗಾವಿ 07: ಪಟ್ಟಣದ ಹಳೆ ಬಸ ನಿಲ್ದಾಣದ ಎದುರುಗಡೆ ಇರುವ ಜನತಾ ಬಜಾರ ಮುಂಭಾಗದಲ್ಲಿರುವ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನದೊಂದಿಗೆ ವಿಶೇಷವಾಗಿ ಮಕ್ಕಳಿಗೆ ನೋಟಪುಸ್ತಕ ಹಾಗೂ ಪೆನ್ನು ವಿತರಿಸುವದರ ಮೂಲಕ ನ್ಯಾಯವಾದಿ ಹಾಗೂ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಮಾಜಿ.ವಿ.ಪ.ಸದಸ್ಯ ಸೋಮಣ್ಣ ಬೇವಿನಮರದ, ಕೆ.ಪಿ.ಸಿ.ಸಿ.ರಾಜ್ಯ ಮಹಿಳಾ ಕಾರ್ಯದರ್ಶಿ ರಾಜೇಶ್ವರಿ ಪಾಟೀಲ, ಕೆ.ಪಿ.ಸಿ.ಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ , ಬಸವರಾಜ ನರಸಪ್ಪ ವಡ್ಡರ, ಹಂಪಿ ಸಿಂಡಿಕೇಟ ಸದಸ್ಯಡಾ.ಪಕ್ಕೀರಗೌಡ ಪಾಟೀಲ ಸೇರಿದಂತೆಅಂಬೇಡ್ಕರ ಅಭಿಮಾನಿಗಳು ಚಿಕ್ಕ ಮಕ್ಕಳು ಉಪಸ್ಥಿತರಿದ್ದರು.