ಶಿಗ್ಗಾವ್

ನಿರ್ಗತಿಕರಿಗೆ, ಬಡವರಿಗೆ ದಿನಸಿ ಕಿಟ್ ವಿತರಣೆ

ನಿರ್ಗತಿಕರಿಗೆ, ಬಡವರಿಗೆ ದಿನಸಿ ಕಿಟ್ ವಿತರಣೆ

ಶಿಗ್ಗಾವಿ 02: ಕಳೆದ 2ವರ್ಷಗಳಿಂದ ಕೊರೊನಾ ಮಹಾಮಾರಿ ಜಗತ್ತನ್ನೆ ತಲ್ಲಣಗೋಳಿಸಿದೆ ಈ ಭಾರಿ ಕೊರೊನಾ ಮಹಾಮಾರಿ ಗ್ರಾಮೀಣ ಭಾಗಗಳಲ್ಲಿ ಹಬ್ಬಿಕೊಂಡಿದ್ದು, ಒಂದೆಡೆಯಾದರೆ ಗ್ರಾಮೀಣ ಭಾಗದ ಬಡವರ ಜೀವನ ಕೆಲಸವಿಲ್ಲದೆ ದುಸ್ಥರವಾಗಿದೆ ಇವರ ಸಹಾಯಕ್ಕೆ ಸರ್ಕಾರಸ ಜೊತೆ ಸಮಾಜ, ಸಂಘ ಸಂಸ್ಥೆಗಳು ಮುಂದೆ ಬರಬೇಕಿದೆ ಎಂದು ರೈತ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ವರುಣಗೌಡ್ರ ಪಾಟೀಲ್ ಹೇಳಿದರು. 

ತಾಲೂಕಿನ ಶಾಡಂಬಿ ಗ್ರಾಮದಲ್ಲಿನ ನಿರ್ಗತಿಕರಿಗೆ ಹಾಗೂ ಬಡವರಿಗೆ ದಿನಸಿ ಕಿಟ್ ಹಾಗೂ ಧನ ಸಹಾಯ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನತೆ ಬಹಳ ಜಾಗೃತವಾಗಿ ಇರುವದರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸುವ ಅವಶ್ಯವಿದೆ ಲಾಕ್‌ಡೌನ್‌ನಿಂದಾಗಿ ಇಂದು ಬಡವರು, ಕೂಲಿ ಕಾರ್ಮಿಕರು ಜೀವನ ಸಾಗಿಸುವದು ಕಷ್ಟಕರವಾಗಿದೆ, ಇಂತಹ ಸಂಧರ್ಭದಲ್ಲಿ ದಾನಿಗಳು ಉಳ್ಳವರು ಮುಂದೆ ಬಂದು ಸಹಾಯ ಸಹಕಾರ ನೀಡುವದರ ಜೊತೆ ಅವರಿಗೆ ಧೈರ್ಯ ತುಂಬುವಂತ ಕಾರ್ಯ ಮಾಡಬೇಕಿದೆ ಎಂದರು. 

ಯುವ ಕಲಾವಿದ ಶರೀಫ  ಮಾಕಪ್ಪನವರ ಮಾತನಾಡಿ ದಿ ಎಮ್ ಸಿ ಪಾಟೀಲ್ ಅವರು ಸಹ ಬಡವರ ಮೇಲೆ ಕಾಳಜಿ ಹೊಂದಿ ಅವರ ಸೇವೆ ಮಾಡುತ್ತಾ ಬಂದಿದ್ದು ಈ ಅವರ ಸುಪುತ್ರ ರೈತ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ವರುಣಗೌಡ್ರ ಪಾಟೀಲ್ ಅವರು ಸಹ ಅವರ ತಂದೆಯವರ ಹಾದಿಯಲ್ಲಿ ಬಡವರ ಸೇವೆ ಮಾಡುತ್ತಾ ಯುವಕರಿಗೆ ಸ್ಪೂರ್ತಿಧಾಯಕವಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಹಿರಿಯ ವರದಿಗಾರ ಬಿ ಎಸ್ ಹಿರೇಮಠ, ವರುಣಗೌಡ್ರ ಪಾಟೀಲ್ ಅಭಿಮಾನಿ ಭಳಗದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ