ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ಬೆಳಗಾವಿ : 10 ವರ್ಷ ಪೂರೈಸಿದ ನಿರ್ದೇಶಕರು ಆ ಸ್ಥಾನದಲ್ಲಿ ಮುಂದೆ ವರೆಯುವಂತಿಲ್ಲ ಎಂಬ ಆರ್ ಬಿಐ ನಿರ್ದೇಶನ ಇದ್ದರೂ ಮತ್ತೆ ಅಧಿಕಾರದಲ್ಲಿ ಮುಂದೆವರೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ 7 ಜನ ನಿರ್ದೇಶಕರನ್ನು ವಜಾ ಮಾಡುವಂತೆ ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಆರ್ ಬಿಐಗೆ ಪತ್ರ ಬರೆದಿದ್ದಾರೆ. ಒಂದು ವೇಳೆ 7 ನಿರ್ದೇಶಕರನ್ನು ವಜಾ ಮಾಡದೆ ಹೋದಲ್ಲಿ ಕಾನೂನಾತ್ಮಕ ಹೋರಾಟ ಮಾಡುವದಾಗಿ ಕೂಡಾ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಭೀಮಪ್ಪ ಗಡಾದ ಅವರು, ಕಳೆದ 10 ವರ್ಷಗಳಿಂದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರಾಗಿ ರಮೇಶ ಕತ್ತಿ, ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗುಡೆ, ನಿಲಕಂಟ ಕಪ್ಪಲಗುದ್ದಿ ಇವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡುವಂತೆ ಆರ್.ಬಿಐ ಗೆ ಪತ್ರ ಬರೆದಿದ್ದಾರೆ.
ಈ ವಿಷಯದ ಕುರಿತು ಮಾಹಿತಿ ಹಕ್ಕಿನಡಿಯಲ್ಲಿ ಕೇಳಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಂಬೈದಲ್ಲಿರುವ ಭಾರತೀಯ ರಿಸರ್ವ ಬ್ಯಾಂಕಿನ ಪ್ರಧಾನ ಕಛೇರಿಯವರು ನೀಡಿರುವ ಲಿಖಿತ ಉತ್ತರದ ಛಾಯಾ ಪ್ರತಿಯನ್ನು ಭಾರತೀಯ ರಿಸರ್ವ ಬ್ಯಾಂಕಿನ ದಿ. 08-10-2025ರ ಆನ್‌ಲೈನ್, ವೆಬ್‌ಸೈಟ್‌ನ ದಾಖಲೆಯನ್ನು ಲಗತ್ತಿಸಲಾಗಿದೆ.
ಭಾರತೀಯ ರಿಸರ್ವ ಬ್ಯಾಂಕಿನ ಈ ತಿದ್ದುಪಡಿ ನಿರ್ದೇಶನಗಳು ದಿ. 01-08-2025 ರಿಂದಲೇ ಜಾರಿಗೆ ಬಂದಿದ್ದರೂ ಕೂಡಾ ರಾಜಕೀಯ ಒತ್ತಡಕ್ಕೆ ಸಿಲುಕಿ ಇದನ್ನು ಅನುಪಾಲನೆ ಮಾಡದೇ ಇರುವುದರಿಂದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಈ ಮೊದಲು ನಿರ್ದೇಶಕರಾಗಿದ್ದವರೇ ಪುನಃ ಚುನಾವಣೆಯಲ್ಲಿ ಆಯ್ಕೆಯಾಗಿರುವರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸುವೆನು.
ಈ ಕಾರಣಗಳಿಂದಾಗಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿರುವ 7 ಜನಆಡಳಿತ ಮಂಡಳಿಯ ಸದಸ್ಯರುಗಳನ್ನು ಭಾರತೀಯ ರಿಸರ್ವ ಬ್ಯಾಂಕಿನ ತಿದ್ದುಪಡಿ ನಿರ್ದೇಶನಗಳು 2026ರ ಪ್ರಕಾರ ಅನರ್ಹಗೊಳಿಸುವುದು ಅವಶ್ಯವಿರುತ್ತದೆ.
ನಿರಂತರವಾಗಿ 10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ನಿರ್ದೇಶಕರುಗಳಾಗಿ ಸೇವೆಯನ್ನು ಸಲ್ಲಿಸುತ್ತಿರುವ 7 ಜನ ನಿರ್ದೇಶಕರುಗಳನ್ನು ಕೂಡಲೇ ನಿರ್ದೇಶಕರ ಸ್ಥಾನದಿಂದ ಅನರ್ಹಗೊಳಿಸಿ ನನಗೆ ಈ ಕುರಿತಾದ ದಾಖಲೆಗಳನ್ನು ನೀಡದೆ ಇದ್ದಲ್ಲಿ ರಿಸರ್ವ ಬ್ಯಾಂಕಿನ ನಿರ್ದೇಶನಗಳನ್ನು ಅನುಪಾಲನೆ ಮಾಡದೇ ಇರುವ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಆರ್ ಬಿಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.