ಅಥಣಿ

ದೇಶದ ಪ್ರಧಾನಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿರುವ ಪಂಜಾಬ ಸರಕಾರವನ್ನು ವಜಾ ಮಾಡಿ

ದೇಶದ ಪ್ರಧಾನಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿರುವ ಪಂಜಾಬ ಸರಕಾರವನ್ನು ವಜಾ ಮಾಡಿ

ಲೋಕದರ್ಶನ ವರದಿ 

ಅಥಣಿ 06: ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಿಗದಿತ ಸರಕಾರಿ ಕಾರ್ಯಕ್ರಮಕ್ಕೆ ತೆರಳುತ್ತಿರುವ ದಾರಿಯಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡದೇ ಬೇಜವಾಬ್ದಾರಿಯಿಂದ ನಡೆದುಕೊಂಡ ಪಂಜಾಬ ಸರಕಾರವನ್ನು ತಕ್ಷಣ ವಜಾ ಮಾಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ರಾಷ್ಟ್ರಪತಿಗಳನ್ನು ಆಗ್ರಹಿಸಿದ್ದಾರೆ. 

               ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಆಗ್ರಹಿಸಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ 2 ವರ್ಷಗಳ ನಂತರ ಇದೇ ಮೊದಲ ಬಾರಿ ಜನಪರ ಯೋಜನೆಗಳ ಅನುಷ್ಠನಗೊಳಿಸುವ ಕಾರ್ಯಕ್ರಮಕ್ಕೆ ತೆರಳಬೇಕಿತ್ತು ಆದರೆ ಹವಾಮಾನ ವೈಪರಿತ್ಯದ ಪರಿಣಾಮ ರಸ್ತೆಮಾರ್ಗದ ಮೂಲಕ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸುರಕ್ಷತೆಯ ಜವಾಬ್ದಾರಿ ಪಂಜಾಬ ಸರಕಾರದ್ದಾಗಿದ್ದರೂ ಕೂಡ ದಾರಿ ಮಧ್ಯದಲ್ಲಿಯೇ ಅನಿವಾರ್ಯವಾಗಿ 15ನಿಮಿಷಗಳ ಕಾಲ ಪಾಕಿಸ್ತಾನದ ಬಾರ್ಡರಗೆ ಅತೀ ಹತ್ತಿರದಲ್ಲಿಯೇ ಇರುವ ಫ್ಲೈ ಓವರ್ ಮೇಲೆ ನಿಲ್ಲಬೇಕಾಯಿತು. ಆದರೆ ಅಷ್ಟು ಸಮಯದವರೆಗೂ ಪಂಜಾಬ ಸರಕಾರದ ಯಾರೊಬ್ಬರೂ ಪ್ರತಿನಿಧಿ ಅಲ್ಲಿಗೆ ಆಗಮಿಸದೆ ಇದ್ದುದು ಪ್ರಧಾನಿಯವರ ಜೀವಕ್ಕೆ ಅಪಾಯ ತಂದೊಡ್ಡುವ ಒಳಸಂಚು ಇರಬಹುದು ಎನ್ನುವ ಸಂಶಯ ಎಲ್ಲರಲ್ಲೂ ಮೂಡಿದೆ. ಹೀಗಾಗಿಯೇ ಪ್ರಧಾನಿ ಮೋದಿಯವರು ಏರಪೋರ್ಟ ಅಧಿಕಾರಿಗೆ ನಾನು ಜೀವಸಹಿತ ವಾಪಸ್ಸಾಗಿದ್ದೇನೆ ಎಂದು ಹೇಳಿರುವುದು ಪುಷ್ಟಿ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

         ಪ್ರಧಾನಿಯಂತಹ ವ್ಯಕ್ತಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿರುವ ಪಂಜಾಬ ಸರಕಾರ ಸಾಮಾನ್ಯ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯ ಇಲ್ಲ. ಅಂತಹ ಸರಕಾರವನ್ನು ತಕ್ಷಣ ವಜಾ ಗೊಳಿಸಬೇಕು ಮತ್ತು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಪಂಜಾಬನ ಜನರನ್ನು ರಕ್ಷಿಸಬೇಕು ಎಂದು ರಾಷ್ಟ್ರಪತಿಗಳನ್ನು ಆಗ್ರಹಿಸಿದ್ದಾರೆ. 


ಸುದ್ದಿ ಓದಿ