ಯೋಗದಿಂದ ರೋಗ ದೂರ: ಮರಿಗೌಡರ
ಯರಗಟ್ಟಿ 08: ಆಧುನಿಕ ಒತ್ತಡದ ಜೀವನ ಶೈಲಿಯ ಪರಿಣಾಮವಾಗಿ ಆರೋಗ್ಯವು ಮರೀಚಿಕೆಯಾಗುತ್ತಿದೆ. ರೋಗಗಳಿಂದ ದೂರ ಉಳಿಯಲು ಯೋಗವೇ ಮದ್ದು ಎಂದು ಪಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಹೇಳಿದರು.
ಪಟ್ಟಣದ ಶ್ರೀ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ವಿಭಾಗದ ಅಡಿಯಲ್ಲಿ ಆಯೋಜಿಸಿದ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದಕ್ಕೂ ಮೊದಲು ಮಹಾವಿದ್ಯಾಲಯದ ಐಕ್ಯುಎಸಿ ಸಂಚಾಲಕರಾದ ಡಾ. ಸುನಂದಾ ಮಾದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯವೇ ಶ್ರೇಷ್ಠ ಸಂಪತ್ತು. ಅದನ್ನು ಗಳಿಸುವ ಮಾರ್ಗವೇ ಯೋಗ ಎಂದು ಹೇಳಿದರು.
ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ಯಲ್ಲಪ್ಪ ಭರಮನ್ನವರ ಹಾಗೂ ಗ್ರಂಥಪಾಲಕರಾದ ಮಹೇಶ ಮಗದುಮ್ಮ ಉಪಸ್ಥಿತರಿದ್ದರು.