ಕಾರವಾರ

ಸರ್ವಋತು ರಸ್ತೆಯೊಂದಿಗೆ ಹೆಚ್ಚಿನ ಅನುದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ; ಸಚಿವ ಸಿ.ಸಿ ಪಾಟೀಲ್

ಸರ್ವಋತು ರಸ್ತೆಯೊಂದಿಗೆ ಹೆಚ್ಚಿನ ಅನುದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ; ಸಚಿವ ಸಿ.ಸಿ ಪಾಟೀಲ್

ಕಾರವಾರ: ಸರ್ವಋತುರಸ್ತೆಯೊಂದಿಗೆ ಹೆಚ್ಚಿನಅನುದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆಎಂದು ಪಿ ಡಬ್ಲ್ಯೂ ಡಿ  ಸಚಿವ ಸಿ.ಸಿ ಪಾಟೀಲ ಹೇಳಿದರು.  

ಸೋಮವಾರಕಾರ್ಮಿಕ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‌ಅವರೊಂದಿಗೆಜಿಲ್ಲೆಯಯಲ್ಲಾಪುರತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದಅವರುಅತಿವೃಷ್ಟಿಯಿಂದ ಭೂ ಕುಸಿತವಾದ ಪ್ರದೇಶದ ಪರೀಶೀಲನೆ ನಡೆಸಿದರು. 

ನಂತರಗ್ರಾಮಸ್ಥರ ಮನವಿಪತ್ರವನ್ನು ಸ್ವೀಕರಿಸಿ ಮಾತನಾಡಿ, ಬೆಂಗಳೂರಿನಿಂದ ನಿರ್ಣಯ ತೆಗೆದುಕೊಳ್ಳುದಕ್ಕೂ ಹಾಗೂ ಸ್ಥಳ ಪರೀಶೀಲಿಸಿ ನಿರ್ಣಯ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈಗಾಗಲೇ ಮುಖ್ಯಮಂತ್ರಿಯವರುಜಿಲ್ಲೆಯ ನೆರೆ ಪೀಡಿತ ಹಾಗೂ ಭೂ ಕುಸಿತ ಸ್ಥಳಗಳನ್ನು ಪರೀಶೀಲಿಸಿ ಜಿಲ್ಲೆಗೆ 210 ಕೋಟಿಅನುದಾನ ನೀಡಿದ್ದಾರೆ. ಸಚಿವ ಶಿವರಾಮ್ ಹೆಬ್ಬಾರ್‌ಅವರಿಂದರಸ್ತೆತೆರವು ಹಾಗೂ ಭೂಕುಸಿತ ಪ್ರದೇಶಗಳಲ್ಲಿ ಕಾಮಗಾರಿ ಭರದಿಂದ ಸಾಗುತಿದ್ದು, ಪಿ ಡಬ್ಲ್ಯೂ ಡಿ ಇಲಾಖೆಯಿಂದ ಕಳಚೆ ಹಾಗೂ ಹಾನಿಯಾದ ಪ್ರದೇಶದಲ್ಲಿ ಸರ್ವಋತುರಸ್ತೆ ನಿರ್ಮಾಣ ಮಾಡಲಾಗುವುದು ಹಾಗೂ ಹೆಚ್ಚಿನಅನುದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುದುಎಂದರು. 

ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿಜನರು ಭಯ ಪಡುವಅಗತ್ಯವಿಲ್ಲ. ಆದಷ್ಟು ಬೇಗ ಮೂಲಸೌಕರ್ಯ ಹಾಗೂ ರಸ್ತೆ ನಿರ್ಮಾಣಕಾರ್ಯ ಕೈಗೊಳ್ಳಲಾಗುವುದುಎಂದು ಹೇಳಿ 

ಜಿಲ್ಲೆಗೆ ಆಗಮಿಸಿದ ರಾಜ್ಯ ಲೋಕೋಪಯೋಗಿಖಾತೆ ಸಚಿವ ಹಾಗೂ ಜಿಲ್ಲೆಯಅರಣ್ಯ ಅಧಿಕಾರಿಗಳು ರಸ್ತೆತೆರವುಕಾರ್ಯದಲ್ಲಿ ಸಾಕಷ್ಟು ಶ್ರಮಿಸಿದ್ದು ಎಲ್ಲರಿಗೂಅಭಿನಂದನೆ ಸಲ್ಲಿಸಿದರು. 

ಸಚಿವರು ಭೇಟಿ ನೀಡಿದ ಪ್ರದೇಶಗಳಲ್ಲಿ ಶಿರಸಿಯ  ಸಹಾಯಕಆಯುಕ್ತರಾದಆಕೃತಿ ಬನ್ಸಾಲ್, ಯಲ್ಲಾಪುರ ಮತ್ತು ಶಿರಸಿ ತಾಲೂಕಿನ  ತಹಶೀಲ್ದಾರ್‌ರು ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದು ಅಗತ್ಯ ಮಾಹಿತಿ ನೀಡಿದರು. 


ಸುದ್ದಿ ಓದಿ