ಶಿಗ್ಗಾವ್

ಸಂತ್ರಸ್ತರಿಗೆ ಪರಿಹಾರ ಸಿಗದೆ ತಾರತಮ್ಯ: ಮನವಿ

ಸಂತ್ರಸ್ತರಿಗೆ ಪರಿಹಾರ ಸಿಗದೆ ತಾರತಮ್ಯ: ಮನವಿ

ಶಿಗ್ಗಾವಿ 05: 2019-20 ನೇ ಸಾಲಿನ ನೆರೆ ಹಾವಳಿಯಿಂದ ಮನೆಗಳು ನೆಲಸಮವಾಗಿ ತಾಲೂಕಿನ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ಸಿಗದೇ ತಾರತಮ್ಯವಾಗಿದೇ ಅದನ್ನು ಸರಿಪಡಿಸಬೇಕು ಎಂದು ಯುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ ಚಾಕಲಬ್ಬಿ ಒತ್ತಾಯಿಸಿದರು. 

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಹೊರಾಂಗಣದಲ್ಲಿ ತಹಶೀಲ್ದಾರಗೆ ಮನವಿ ನೀಡಿ ಮಾತನಾಡಿ 2020-21 ನೇ ಸಾಲಿನ ಹಾನಿಗೋಳಗಾದ ಕಡುಬಡವರ ಮನೆಗಳಿಗಾದರೂ ಸಂಪೂರ್ಣ ಸೌಲಭ್ಯ ದೊರುವಂತಾಗಲಿ ಹಾಗೂ ಯೂರಿಯಾ ರಸಗೊಬ್ಬರ ಸಮರ​‍್ಕವಾಗಿ ಪೊರೈಕೆಯಾಗಲಿ ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಪಕ್ಕೀರ​ಪ್ಪ ಕುಂದೂರು, ಮಂಜುನಾಥ ಕಂಕನವಾಡ, ರಮೇಶ ದೊಡ್ಡಮನಿ, ಮಂಜುನಾಥ ಮಾಳಪ್ಪನವರ, ಪ್ರಕಾಶ ಮುನಾಯಿ, ಸಂತೋಷ ಮಾದರ, ಮಂಜುನಾಥ ಕಟ್ಟಿಮನಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ