ಯರಗಟ್ಟಿ

ರೈತರ ಜಮೀನುಗಳಿಗೆ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಭೇಟಿ ಬೆಳೆ ವಿಕ್ಷಣೆ

ರೈತರ ಜಮೀನುಗಳಿಗೆ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಭೇಟಿ ಬೆಳೆ ವಿಕ್ಷಣೆ

ಯರಗಟ್ಟಿ 19: ನಂತರ ಮಾತನಾಡಿದ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಕಾರಣ ಹೆಸರು, ಗೋವಿನ ಜೋಳ,ಹತ್ತಿ ಬೆಳೆಗಳು ಉತ್ತಮ ಸ್ಥಿತಿಯಲ್ಲಿದ್ದು ಅಲ್ಲಲ್ಲಿ ರೋಗ ಮತ್ತು ಕೀಟ ಭಾದೆ ಕ್ಷೇತ್ರಗಳಿಗೆ ಭೇಟಿ ನೀಡಿ ಹತೋಟಿ ಕ್ರಮಗಳ ಕುರಿತು ತಿಳಿಸಿದರು. 

ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಹೆಸರು ಬೆಳೆ ಸಾಕಷ್ಟು ರೈತರು ಬೆಳೆದಿದ್ದು ಗ್ರಾಮದ ರೈತ ಬಂಗಾರೆಪ್ಪ ಹರಳಿ ಅವರ ಹೆಸರು ಬೆಳೆಗೆ ಬೂದು ರೋಗ ಕಂಡು ಬಂದ ಹಿನ್ನಲೆಯಲ್ಲಿ ಹೆಕ್ಸಾಕೊನೋಝೇಲ್ 1 ಎಂ. ಎಲ್‌. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡಲು ತಿಳಿಸಲಾಯಿತು. 

ಅದೇ ರೀತಿ ಎಪಿಯಾನ್ ಅಂಪ್ಯುಲಮ್ ಕೀಟ ಕಂಡು ಬಂದಲ್ಲಿ ಲ್ಯಾಂಬಡಾ ಸೈಲೋತ್ರೀನ್ 0.5 ಎಂ. ಎಲ್‌. ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡಬೇಕು ಮತ್ತು ಗೋವಿನ ಜೋಳದ ಬೆಳೆಯಲ್ಲಿ ಲದ್ದಿ ಹುಳು ನಿರ್ವಹಣೆಗೆ ಇಮಾಮೆಕ್ಟಿನ್ ಬೆಂಜೋಯೇಟ್ 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು. 

ರೈತರು ಆದಷ್ಟು ಅಂತರ ಬೆಳೆ ಮತ್ತು ಮಿಶ್ರ ಬೆಳೆ ಮೊರೆ ಹೋಗಬೇಕು ಆಗ ರೈತರು ತಮ್ಮ ಹೊಲಗಳಿಗೆ ಹೋಗಿ ಬೆಳೆಗಳ ಪರಿಸ್ಥಿತಿ ಆಧಾರದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ಸಂಪರ್ಕ ಮಾಡಿ ಬೆಳೆ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು. 

ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ತಮ್ಮ ಗ್ರಾಮಕ್ಕೆ ನಿಯೋಜನೆ ಮಾಡಿದ ಖಾಸಗಿ ನಿವಾಸಿ ಸಹಾಯದಿಂದ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ತಿಳಿಸಿದರು. 

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನವರ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ ಹಾಗೂ ಕೃಷಿ ಸಂಜೀವಿನಿ ಸಿಬ್ಬಂದಿ ವರ್ಗದವರು ರೈತರು ಇದ್ದರು. 

  

ಸುದ್ದಿ ಓದಿ