ಕೋರೋನಾ ವಾರಿಯರ್ಸ್ಗಳಿಗೆ ಊಟದ ವ್ಯವಸ್ಥೆ
ಶಿಗ್ಗಾವಿ 07: ಶಿಗ್ಗಾವಿ ಪಟ್ಟಣದ ಪ್ರತಿಷ್ಟಿತ ಜಯಲಕ್ಷ್ಮಿ ಹೋಟೆಲ್ ಸಮೂಹ ಸಂಸ್ಥೆಯ ವತಿಯಿಂದ ಪಟ್ಟಣದ ಕೋರೋನಾ ವಾರಿಯರ್ಸ್ಗಳಿಗೆ ಮದ್ಯಾಹ್ನದ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು ಮಾಡಲಾಯಿತ್ತು.ಪಟ್ಟಣದ ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಪುರಸಭೆ ಸಿಬ್ಬಂದಿ ಮತ್ತು ಪೌರಕಾಮರ್ಿಕರು ಹಾಗೂ ಪತ್ರಕರ್ತರು ಸೇರಿದಂತೆ ಕೋರೋನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಸುಪ್ರಸಿದ್ದ ಊಟದ ವ್ಯವಸ್ಥೆ ಮಾಡುವ ಮೂಲಕ ನಮಗಾಗಿ ದುಡಿಯುತ್ತಿರುವ ವಾರಿಯರ್ಸ್ಗಳಿಗೆ ನೆರವಾದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಯಲಕ್ಷ್ಮಿ ಹೋಟೆಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ನಾಗರಾಜ ಭ್ರಹ್ಮಾವರ, ನಮಗಾಗಿ ದುಡಿಯುತ್ತಿರುವವರಿಗಾಗಿ ಇದೊಂದು ಅಳಿಲು ಸೇವೆ ಅಷ್ಟೇ, ನಮ್ಮ ರಕ್ಷಣೆಗಾಗಿ ಮತ್ತು ನಮ್ಮ ಆರೋಗ್ಯಯುತ ಜೀವನಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕತರ್ೆಯರು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿ ವರ್ಗಕ್ಕೆ ನಮ್ಮದೊಂದು ಸೇವೆಯಷ್ಟೆ, ಕಳೆದ ಬಾರಿಯೂ ಈ ವ್ಯವಸ್ಥೆ ಮಾಡಿದ್ದೆವು. ಈ ಬಾರಿಯೂ ಮಾಡಲಾಗಿದೆ ಎಂದರು.ರಮೇಶ ಬ್ರಹ್ಮಾವರ ಮಾತನಾಡಿ ಕೊರೋನಾ ತುತರ್ು ಪರಿಸ್ಥಿತಿಯನ್ನ ನಾವು ಚೆನ್ನಾಗಿ ಅನುಭವಿಸಿದ್ದೇವೆ ಆದಕಾರಣ ಕೊರೋನಾ ವಾರಿಯರ್ಸಗಳಿಗೆ ನಾವು ನಿವೇಲ್ಲ ನೈತಿಕವಾಗಿ ಬೆಂಬಲ ನೀಡಿದಾಗ ಅವರೆಲ್ಲರೂ ದೈರ್ಯದಿಂದ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಎಂದರು.ಜಯಲಕ್ಷ್ಮಿ ಹೋಟೆಲ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣರಾವ ಬ್ರಹ್ಮಾವರ, ಜನಾರ್ಧನ ಬ್ರಹ್ಮಾವರ, ಸಂತೋಷ ಬ್ರಹ್ಮಾವರ, ನಿತೀನ ಬ್ರಹ್ಮಾವರ, ನಂದನ, ಚೇತನ ಹಾಗೂ ಸಿಬ್ಬಂದಿಗಳು ಇದ್ದರು