ಪೌರಕಾಮರ್ಿಕರೊಂದಿಗೆ ಜಿಲ್ಲಾಧಿಕಾರಿಗಳ ಭೋಜನ
ಬಳ್ಳಾರಿ 05: ಹಂಪಿ ಉತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ನಗರ ಸ್ಥಳಿಯ ಸಂಸ್ಥೆಗಳಿಂದ ಆಗಮಿಸಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 250 ಜನ ಪೌರ ಕಾಮರ್ಿಕರೊಂದಿಗೆ ಜಿಲ್ಲಾಧಿಕಾರಿ ಡಾ|| ರಾಮಪ್ರಸಾದ್ ಮನೋಹರ್ ಮದ್ಯಾಹ್ನ ಪೌರ ಕಾಮರ್ಿಕರಿಗೆ ಊಟವನ್ನು ಬಡಿಸಿ ಅವರೊಂದಿಗೆ ಸಹಭೋಜನ ಸವಿದು ಹಂಪಿ ಉತ್ಸವದಲ್ಲಿ ಕೈಗೊಂಡ ಸ್ವಚ್ಚತಾಕಾರ್ಯಕ್ರಮವನ್ನು ಮೆಚ್ಚಿಕೊಂಡರು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳಾ ಕಾಮರ್ಿಕರಿಗೆ ಉಡುಗೊರೆಯಾಗಿ ಸೀರೆ ಮತ್ತು ಪುರುಷ ಪೌರಕಾಮರ್ಿಕರಿಗೆ ಪ್ಯಾಂಟ್ ಮತ್ತು ಶೆಟರ್್ಗಳನ್ನು ವಿತರಿಸಿದರು. ಫೆ.25ರಿಂದ ಮಾರ್ಚ 04 ರವರಗೆ 8 ದಿನಗಳ ಕಾಲ ಕೆಲಸ ನಿರ್ವಹಿಸಿದ ಪೌರಕಾಮರ್ಿಕರಿಗೆ 2000 ರೂ ಗೌರವ ದನವನ್ನು ವಿತರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸಿಲ್ದಾರ ವಿಶ್ವನಾಥ ಹೊಸಪೇಟೆ ನಗರಸಭೆ ಆಯುಕ್ತ ರಮೇಶ್, ಕಾಮಲಪೂರ ಪಟ್ಟಣಪಂಚಾಯಿತಿ ಮುಖ್ಯ ಅಧಿಕಾರಿ ಶಿವಕುಮಾರ ಕಟ್ಟಿಮನೆ, ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.