ತಾಳಿಕೋಟಿ

ಹದಗೆಟ್ಟ ತಮದಡ್ಡಿ-ತಾಂಡಾ ರಸ್ತೆ: ಮರು ನಿರ್ಮಾಣ ಯಾವಾಗ?

ಹದಗೆಟ್ಟ ತಮದಡ್ಡಿ-ತಾಂಡಾ ರಸ್ತೆ: ಮರು  ನಿರ್ಮಾಣ  ಯಾವಾಗ?

ತಾಳಿಕೋಟಿ 28: ಸಮೀಪದ ತಮದಡ್ಡಿ ಗ್ರಾಮದಿಂದ ತಾಂಡಾಗೆ ಹೊಗುವ ಕೂಡು ರಸ್ತೆ ಸಂಪೂರ್ಣ ಹಾಳಾಗಿಹೊಗಿದ್ದು, ಇಲ್ಲಿಯ ಗ್ರಾಮಸ್ಥರು ನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿರುವುದು ನಮ್ಮ ಹದಗೆಟ್ಟ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. 

ತಾಳಿಕೋಟಿ ಪಟ್ಟಣದಿಂದ ಅನತಿ ದೂರದಲ್ಲಿಯೆ ಇರುವ ಈ ಗ್ರಾಮದ ಎರಡನೇ ವಾರ್ಡನಲ್ಲಿ ಬರುವ ಈ ರಸ್ತೆ ಇಲ್ಲಿಂದ 2 ಕಿ.ಮೀ ಅಂತರದಲ್ಲಿರುವ ತಾಂಡಾಗೆ ಹೊಗುವ ಮುಖ್ಯ ಸಂಪರ್ಕ ರಸ್ತೆಯಾಗಿದೆ. ಇದು ಹಾಳಾಗಿ ಹೊಗಿದ್ದು ಎಲ್ಲೆಂದರಲ್ಲಿ ತಗ್ಗು ದಿನ್ನಿಗಳು ಬಿದ್ದಿವೆ. ನಿತ್ಯ ಸುರಿಯುತ್ತಿರುವ ಜಿಟಿ ಮಳೆಯಿಂದಾಗಿ ರಸ್ತೆಯ ಮೇಲೆ ನೀರು ನಿಂತು ಕೆಸರು ಗದ್ದೆಯಂತಾಗಿ ಇಲ್ಲಿಂದ ಹೊಗುವ ವಾಹನಗಳು ಒಲಾಡುತ್ತ, ಜೋಲಾಡುತ್ತ, ಸಾಗುವಂತಹ ಪರಿಸ್ಥಿತಿ ಇಲ್ಲಿದೆ. 

ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮಸ್ಥ ಶರಣಗೌಡ ಕರಡ್ಡಿ ಸಾಹೇಬ್ರ 15ವರ್ಷದಿಂದ ಈ ರಸ್ತೆ ಹಾಳಾಗೈತ್ರೀ ಯಾರ ಬಂದ್ರು ಕೆಲಸಾ ಮಾಡಾಕತ್ತಿಲ್ಲ್ ಯಾವಾಗ ಕೇಳಿದ್ರು ಟೆಂಡರ ಆಗೈತೀ ಅಂತಾನೇ ಹೇಳತಾರ್ ಇನ್ನ 6ತಿಂಗಳದಾಗ ಮತ್ತೇ ಇಲೇಕ್ಷನ್ ಬರಾಕಹ್ತೈತಿ ನಮಗಂತೂ ಇದರ ಕಾಲಾಗ ಸಾಕಾಗಿ ಹೋಗೈತ್ರೀ ಎಂದು ಹೇಳಿದರು. ತಾಂಡಾದ ಸಮೀಪದಲ್ಲಿಯೆ ಕೆರೆಯ ನೀರು ರಸ್ತೆ ಮೇಲೆ ಹರಿಯುತ್ತೀರುವುದರಿಂದ ಎಷ್ಟೋ ದ್ವ-ಚಕ್ರ ವಾಹನ ಸವಾರರು ಬಿದ್ದು ಕೈ ಕಾಲು ಮುರಿದು ಕೊಂಡಿದ್ದಾರೆ. ಇನ್ನೂ ಇಲ್ಲಿಂದ ಗರ್ಭಿಣಿ ಮಹಿಳೆಯರು ಹೆರಿಗೆಗಾಗಿ ಸಮೀಪದ ತಾಳಿಕೋಟಿಗೆ ಬರಬೇಕಾಗುತ್ತದೆ. ಇವರ ಸ್ಥಿತಿಯಂತು ಆ ಭಗವಂತನೆ ಬಲ್ಲ. 

ರಸ್ತೆ ಮರು ನಿರ್ಮಿಸಿ: ಸಂಪೂರ್ಣ ಹದಗೆಟ್ಟಿರುವ ಈ ರಸ್ತೆ ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ, ಇದನ್ನು ಮರು ನಿರ್ಮಾಣ  ಮಾಡಬೇಕು ಎನ್ನುತ್ತಾರೆ. ಇಲ್ಲಿಯ ಗ್ರಾಮಸ್ಥರು ಈ ಭಾಗದ ಶಾಸಕರು ತಮ್ಮ ವ್ಯಾಪ್ತಿಗೆ ಬರುವ ಈ ರಸ್ತೆಯನ್ನು ಮರು ನಿಮರ್ಾಣ ಮಾಡಿಕೊಟ್ಟರೆ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ 

ಸುದ್ದಿ ಓದಿ