ತಾಳಿಕೋಟಿ

ಗ್ರಾಮೀಣ ಶಾಲೆಗಳಿಗೆ ಡಿಜಿಟಲ್ ಪಠ್ಯ

ಗ್ರಾಮೀಣ ಶಾಲೆಗಳಿಗೆ ಡಿಜಿಟಲ್ ಪಠ್ಯ

ತಾಳಿಕೋಟೆ 29: ಸೆಲ್ಕೊದ ಇಶಾಲಾ ಡಿಜಿಟಲ್ ಶಿಕ್ಷಣ ಕಾರ್ಯಕ್ರಮದಡಿ ರಾಜ್ಯದಲ್ಲಿನ 1500 ಗ್ರಾಮೀಣ ಪ್ರದೇಶದ ಶಾಲೆಗಳಿಗೆ  ಡಿಜಿಟಲ್ ಪಠ್ಯ ಮತ್ತು ಡಿಜಿಟಲ್ ಉಪಕರಣ ಸಹಿತ ಮಲ್ಟಿಮಿಡಿಯಾ ಕಾರ್ಯಕ್ರಮಗಳನ್ನು ನೀಡಲಾಗಿದೆ. ಇದು  ಸೌರಶಕ್ತಿ ಆಧರಿಸಿದ ಡಿಜಿಟಲ್ ವ್ಯವಸ್ಥೆಯಾಗಿದ್ದು  ತರಗತಿಯೊಳಗಿನ ಶಿಕ್ಷಣ ಕ್ರಮವನ್ನು ಉನ್ನತೀಕರಿಸುತ್ತದೆ ಎಂದು ಸೆಲ್ಕೊ ಸೋಲಾರ ಲೈಟ್ ಪ್ರೈ.ಲಿ.ನ ಡಿಪ್ಯೂಟಿ ಜನರಲ್ ಮ್ಯಾನೇಜರ್ ಪ್ರಸನ್ನ ಹೆಗಡೆ ಹೇಳಿದರು. 

ಅವರು ಪಟ್ಟಣದ ಎಸ್‌.ಕೆ.ಪ್ರೌಢಶಾಲೆಯಲ್ಲಿ ಸೆಲ್ಕೊ ಕಂಪನಿ ಕೊಡಮಾಡಿದ ಸೌರಶಕ್ತಿ ಚಾಲಿತ 1.75 ಲಕ್ಷ ಮೌಲ್ಯದ ಎರಡು ಡಿಜಿಟಲ್ ಸ್ಮಾರ್ಟಬೋರ್ಡಗಳನ್ನು ಉದ್ಘಾಟಿಸಿ ಮಾತನಾಡಿದರು. 

ವಿಜಯಪುರ ಜಿಲ್ಲೆಯಲ್ಲಿ ಹಿಂದುಳಿದ ಮತ್ತು ಗ್ರಾಮೀಣ ಭಾಗದ ಸರ್ಕಾರಿ, ಅನುದಾನಿತ 250 ಶಾಲೆಗಳಿಗೆ ಕೂಡ ಡಿಜಿಟಲ್ ಎಜ್ಯಕೇಶನ್ ಕಾರ್ಯಕ್ರಮವನ್ನು ಇಶಾಲಾದಡಿ ಕೊಡಮಾಡಿದೆ. ನಾವು ಶಿಕ್ಷಣ ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರಗಳಿಗೆ  ಸೆಲ್ಕೊ ಸೋಲಾರನಿಂದ ಸೇವೆಗಳನ್ನು ವಿಸ್ತರಿಸಿದ್ದೇವೆ. 75ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ಬೆಳಕಿನ ವ್ಯವಸ್ಥೆ ಮಾಡಿದ್ದು ರಾಯಚೂರು ಜಿಲ್ಲೆಯಲ್ಲಿನ ಆರೋಗ್ಯ ಕೇಂದ್ರಗಳಿಗೆ ರೂ.7ಕೋಟಿ ಮೌಲ್ಯದಲ್ಲಿ ಸೌರಶಕ್ತಿ ಬೆಳಕಿನ ವ್ಯವಸ್ಥೆ ಹಾಗೂ ಕೊರತೆಯಿರುವ ವೈದ್ಯಕೀಯ ಉಪಕರಣಗಳನ್ನೂ  ಒದಗಿಸುತ್ತಿದ್ದೇವೆ. ಇದರಂತೆ  ಯಾದಗಿರಿ ಜಿಲ್ಲೆಗೂ ವಿಸ್ತರಣೆಯಾಗಲಿದೆ ಎಂದರು. ತಮ್ಮ 35ಕ್ಕೂ ಹೆಚ್ಚಿನ ಉತ್ಪನ್ನಗಳು ಸೌರಶಕ್ತಿ ಆಧರಿಸಿದ್ದು ನೈಸರ್ಗಿಕ ಸಂಪನ್ಮೂಲದ ಬಳಕೆಗೆ ಪರಿಸರ ಮಾಲಿನ್ಯ ತಡೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. 

ಶಾಲೆಯ ಹಳೆಯ ವಿದ್ಯಾರ್ಥಿನಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆ ಸವಿತಾ ಇನಾಮದಾರ ಮಾತನಾಡಿ, ಜೀವನದಲ್ಲಿನ ಯಶಸ್ಸಿಗೆಗೆ ಶಿಸ್ತು, ಶ್ರದ್ಧೆ ಹಾಗೂ ಪ್ರಾಮಾಣಿಕತೆ ರೂಢಿಸಿಕೊಂಡು ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಎಸ್‌.ಡಿ.ಕರಜಗಿ, ವೀ.ವಿ.ಸಂಘದ ಉಪಾಧ್ಯಕ್ಷ  ಚನ್ನಮಲ್ಲು ಕತ್ತಿ, ಶಾಲೆಯ ಹಳೆಯ ವಿದ್ಯಾರ್ಥಿ ಅಬಕಾರಿ ಇಲಾಖೆಯ ಅಕ್ಷಕ ಜಗದೀಶ ಇನಾಮದಾರ  ಮಾತನಾಡಿದರು. 

 ವೇದಿಕೆಯಲ್ಲಿ ಮುರುಘೇಶ ವಿರಕ್ತಮಠ, ವೀ.ವಿ.ಸಂಘದ ಅಧ್ಯಕ್ಷ ಎಸ್‌.ಎ.ಸರೂರ, ಕಾಶಿನಾಥ ಮುರಾಳ, ಎಂ.ಎಸ್‌.ಸರಶೆಟ್ಟಿ, ಸೆಲ್ಕೋ ಕಂಪನಿಯ ಏರಿಯಾ ಮ್ಯಾನೇಜರ್ ವಿನಾಯಕ ಹೆಗ್ಗಡೆ, ಸೆಲ್ಕೋ ಸೋಲಾರ್ ಲೈಟ್ ಪ್ರೈ. ಲಿ. ವಿಜಯಪುರ ಶಾಖೆಯ ಪ್ರತಿನಿಗಳಾದ ಲಕ್ಷಿ-್ಮಕಾಂತ ಕುಲಕರ್ಣಿ, ಆನಂದ ಪಡನಾಡ, ಪ್ರಸನ್ನ ಗುಮಾಸ್ತೆ, ವಿನಾಯ ಗುಜ್ಜರ. ಇದ್ದರು. ಎ.ಬಿ.ಇರಾಜ ಸ್ವಾಗತಿಸಿದರು. ಪಿ.ಬಿ.ಭಂಟನೂರ ಪ್ರಾಸ್ತಾವಿಕ ಮಾತನಾಡಿದರು. ಆರ್‌.ಜಿ.ರಾಠೋಡ ನಿರ್ವಹಿಸಿದರು. ಎಸ್‌.ಎಂ.ಪಾಟೀಲ ವಂದಿಸಿದರು. 


ಸುದ್ದಿ ಓದಿ