ಬಡ ಅಸಹಾಯಕ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಸರೆ
ಯರಗಟ್ಟಿ: ಇಂದು ಹತ್ತು ಹಲವಾರು ಸಂಸ್ಥೆಗಳಿದ್ದು ಅದರಲ್ಲಿ ಒಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಬಡವರ ಪಾಲಿಗೆ ತುಂಬಾ ಆಸರೆಯಾಗಿದ್ದು ಜನರು ಸಂಘದ ಲಾಭ ಪಡೆದುಕೊಳ್ಳಬೇಕೆಂದು ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.
ಸಮೀಪದ ಯರಝರ್ವಿ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಹಮ್ಮಿಕೊಳ್ಳಲಾದ ಅಸಹಾಯಕ ಹಾಗೂ ನಿರ್ಗತಿಕ ವಾತ್ಸಲ್ಯ ಕಾರ್ಯಕ್ರಮದಡಿ ಬಡವರಿಗೆ ಬಟ್ಟೆ ಹಾಗೂ ಪಾತ್ರೆ ಕಿಟ್ಟ ವಿತರಣೆ ಮಾಡಿ ಮಾತನಾಡಿದರು.
ಯರಗಟ್ಟಿ ತಾಲೂಕಿನ ಯೋಜನಾಧಿಕಾರಿಗಳಾದ ಸತೀಶ್ ಡಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸರಸ್ವತಿ ಎಂ, ಮೇಲ್ವಿಚಾರಕರು ಸಂಭಾಜಿ ಎಸ್, ಕಛೇರಿ ಸಹಾಯಕ ಸತೀಶ್ ಕನ್ನಯ್ಯನವರ, ಸೇವಾ ಪ್ರತಿನಿಧಿ ಸುನೀತ್ ದೇಶನೂರ, ಡಾ. ಎ ಎಮ್ ಶಂಕರಲಿಂಗಪ್ಪ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಉಪಸ್ಥಿತರಿದ್ದರು.