ಸಿಂಧಗಿ

ಭಕ್ತ ಕನಕದಾಸ ಜಯಂತ್ಯೋತ್ಸವ

ಭಕ್ತ ಕನಕದಾಸ ಜಯಂತ್ಯೋತ್ಸವ


ಸಿಂದಗಿ17:   ಸಿಂದಗಿ ತಾಲೂಕ ಕುರಬ ಸಂಘ ಹಾಲುಮತ ಸಮಾಜದ ಎಲ್ಲ ಸಂಘಟನೆಗಳ  ಸಂಯುಕ್ತ ಆಶ್ರಯದಲ್ಲಿ  ಡಿ.18 ರಂದು ಬೆಳಿಗ್ಗೆ 11.00ಗಂಟೆಗೆ ಭಕ್ತ ಕನಕದಾಸ ಜಯಂತ್ಯೋತ್ಸವ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಗೋಳಸಾರದ  ಅಭಿನವ  ಪುಂಡಲಿಂಗ  ಮಹಾರಾಜರು,  

ಹುಲಿಜಂತಿಯ ಪೀಠಾಧಿಪತಿಗಳಾದ ಮಾಳಿಂಗರಾಯ ಮಹಾರಾಜರು, ಸಾರಂಗಮಠ-ಗಚ್ಚಿನಮಠಸ ಡಾ.ಪ್ರಭುಸಾರಂದೇವ ಶಿವಾಚಾರ್ಯರು, ಹಗ್ಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಚಂದ್ರಾಮ ಪೂಜಾರಿ, ಗುರುದೇವ ಆಶ್ರಮದ ಶ್ರೀ ಶಾಂತಗಂಗಾದರ ಸ್ವಾಮೀಜಿಗಳು, ಗುಬ್ಬೇವಾಡ ಅಮೋಘಸಿದ್ದ ದೇವರ ಧರ್ಮದರ್ಶಿ ಶ್ರೀ ಕನ್ನಯ್ಯ ಮುತ್ಯಾ ಒಡೆಯಯರ ಒಹಿಸುವರು. 

ತಾಲೂಕಾ ಕುರುಬರ ಸಂಘದ ಅಧ್ಯಕ್ಷ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸುವರು. ಕುರುಬ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಕಂಬಾಗಿ, ತಾಲೂಕಾ ಗೌರವಾಧ್ಯಕ್ಷ ಸುದರ್ಶನ ಜಿಂಗಾಣಿ ನೇತೃತ್ವ ವಹಿಸುವರು. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆ.ಎಸ್‌. ಈಶ್ವರ​‍್ಪ ಕಾರ್ಯಕ್ರಮ ಉದ್ಘಾಟಿಸುವರು, ಮಾಜಿ ಸಚಿವ ಎಚ್‌.ಎಮ್‌. ರೇವಣ್ಣ ಡೊಳ್ಳು ಉದ್ಘಾಟಿಸುವರು. 

ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಮೇರವಣಿಗೆ ಉದ್ದಾಟಿಸುವರು. ಶಾಸಕರಾದ ರಮೇಶ ಭೂಸನೂರ, ಸುನೀಲಗೌಡ ಪಾಟೀಲ ಅವರು ಜ್ಯೋತಿ ಬೆಳಗಿಸುವರು. ಹಾಗೂ ಗಣ್ಯರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಸುದ್ದಿ ಓದಿ