ಮಹದಾಸೆಯಿಂದ ಕ್ಷೇತ್ರದಲ್ಲಿನ ಕೆರೆಗಳ ಅಭಿವೃದ್ಧಿ ಮಾಡಲಾಗುವುದು: ಶಾಸಕ ರಮೇಶ
ಸಿಂದಗಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಹಾಗೂ ಆ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಲಿ ಎನ್ನುವ ಮಹದಾಸೆಯಿಂದ ಕ್ಷೇತ್ರದಲ್ಲಿನ ಕೆರೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಶನಿವಾರ ತಾಲೂಕಿನ ಸಾಸಾಬಾಳ ಗ್ರಾಮದ ಹತ್ತಿರದಲ್ಲಿರುವ ಸಾಬಾಬಾಳ-ಯಂಕಂಚಿ ಕೆರೆಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ವಿಶಾಲ ವ್ಯಾಪ್ತಿಯ ಕೆರೆ ಇದಾಗಿದೆ. ಈ ಕೆರೆಯು ತಲತಲಾಂತರದಿಂದ ಕೆರೆಯ ನೀರು ಅಲ್ಲಿನ ಅಂತರ್ಜಲ ಹೆಚ್ಚಿಸಿದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಗುಬ್ಬೇವಾಡ, ಕಣ್ಣಗುಡ್ಡಿಹಾಳ, ಹಂದಿಗನೂರ, ಸಾಬಾಬಾಳ, ಬಸ್ತಿಹಾಳ ಮುಂತಾದ ಹಳ್ಳಿಗಳಿಗೆ ಈ ಕೆರೆ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೇಳದರು.
ಬಿಜೆಪಿ ಸಿಂದಗಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ, ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ, ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ರವಿ ನಾಯ್ಕೋಡಿ, ಮಲ್ಲನಗೌಡ ಬಗಲಿ, ಪೀರು ನಾಯ್ಕೋಡಿ ಸೇರಿದಂತೆ ಇತರು ಈ ಸಂದರ್ಭದಲ್ಲಿ ಇದ್ದರು.