ಭವ್ಯ ಭಾರತದ ಅಭಿವೃದ್ಧಿ ಯುವ ಸಮುದಾಯದ ಕೈಯಲ್ಲಿದೆ: ಶಿವಾನಂದ ಮ್ಯಾಗೇರಿ
ಲೋಕದರ್ಶನ ವರದಿ
ಶಿಗ್ಗಾವಿ 17: ಇಂದಿನ ಯುವಕರೆ ನಾಳಿನ ನಾಡಿನ ನಾಯಕರು ಅಭಿವೃದ್ಧಿಯ ಸಹಾಯಕರು ಭವ್ಯ ಭಾರತ ಅಭಿವೃದ್ದಿ ಇಂದಿನ ಯುವ ಸಮುದಾಯದ ಕೈಯಲ್ಲಿದೆ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ತಾಲೂಕಿನ ಗಂಜಿಗಟ್ಟಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಏರಿ್ಡಸಿದ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಮಾತನಾಡಿದ ಅವರು ವಿದ್ಯೆಯ ಜೊತೆಗೆ ಬುದ್ಧಿ ಬಳಸುವುದೇ ಕೌಶಲ್ಯ ಈ ಕೌಶಲ್ಯವನ್ನು ಉಪಯೋಗಿಸಿ ಹೊಸ ಹೊಸ ತಂತ್ರಜ್ಞಾನದ ತರಬೇತಿಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಂಟಿಯಾಗಿ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದ್ದು ಇದರ ಲಾಭವನ್ನು ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗ ಕೊಡುವ ವ್ಯಕ್ತಿಯಾಗಿ ಶಕ್ತಿಯಾಗಬೇಕೆಂದರು.
ಸರಕಾರಿ ಉದ್ಯೋಗಕ್ಕಾಗಿಯೇ ಕಲಿಕೆ ಮುಖ್ಯವಲ್ಲ ಅನೇಕ ವಿದ್ಯಾರ್ಥಿಗಳು ಪಾಲಕರು ಸರಕಾರಿ ಉದ್ಯೋಗ ಬೇಕು ಎಂಬ ಬಯಕೆಯಲ್ಲಿಯೇ ಅವರ ಆಯುಷ್ಯ ಮತ್ತು ಚೈತನ್ಯ ಹಾಳಾಗುತ್ತಿದೆ ಅದನ್ನು ಬಿಟ್ಟು ಸರಕಾರವೇ ನಿಮ್ಮನ್ನು ಮರಳಿ ನೋಡುವಂತೆ ಕೈಗಾರಿಕೆಯ ತರಬೇತಿ ಪಡೆದು ನೂತನ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸಿದರೆ ಪ್ರತಿಫಲ ನಿಜವಾಗಿಯೂ ಲಭಿಸುತ್ತದೆ ಎಂದರು.
ಪ್ರಭಂಜನ್ ಸಿದ್ದ ಉಡುಪು ತಯಾರಿಕಾ ಘಟಕದ ನಿರ್ದೇಶಕ ರಾಘವೇಂದ್ರ ಮೇಲಗೇರಿ ಮಾತನಾಡಿ ಸಿದ್ದ ಉಡುಪುಗಳ ಘಟಕಕ್ಕೆ ನಾನು ಒಮ್ಮೆ ಭೇಟಿ ನೀಡಿದಾಗ ನಾನು ಇಂತಹ ಸ್ವಂತ ಘಟಕ ಮಾಡಬೇಕೆಂದು ನಿರ್ಧರಿಸಿದೆ ಪ್ರಯತ್ನಪಟ್ಟೆ ಕಷ್ಟಪಟ್ಟೆ ಹತ್ತು ಹಲವಾರು ಕೈಗಾರಿಕೆಗಳಿಗೆ ಭೇಟಿ ನೀಡಿ ಅನುಭವವನ್ನು ಪಡೆದುಕೊಂಡೆ ಮುಂದೆ ನಾನು ಸ್ವಂತ ಗಾಮೆಂರ್ಟ್ ಮಾಡಿ ಈಗ ನೂರಾರು ನಿರುದ್ಯೋಗ ಮಹಿಳೆಯರಿಗೆ ಉದ್ಯೋಗ ನೀಡಿದ ಸಂತೋಷ ನನಗಿದೆ ಕಷ್ಟಪಟ್ಟು ತಾವೆಲ್ಲರೂ ಕೈಗಾರಿಕಾ ತರಬೇತಿ ಪಡೆದರೆ ನಿಜವಾಗಿಯೂ ನಿಮಗೆ ವಿಶೇಷ ಕೌಶಲ್ಯಮೂಡಿ ಸ್ವಂತ ಉದ್ಯಮಿಗಳಾಗುವ ಎಲ್ಲ ಲಕ್ಷಣಗಳು ತಮ್ಮ ಮುಖದಲ್ಲಿ ಕಾಣುತ್ತಿವೆ ಎಂದರು.
ತರಬೇತಿ ಅಧಿಕಾರಿ ಸಾತಗೊಂಡ, ಉಪನ್ಯಾಸಕ ಶಶಿಕಾಂತ ರಾಠೋಡ. ಉಪನ್ಯಾಸಕ ನಾರಾಯಣ. ಮಲ್ಲಿಕಾರ್ಜುನ ಹಡಪದ್ ಹಾಗೂ ಐಟಿಐ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.