ಶಿಗ್ಗಾವ್

ಉತ್ತಮ ಕೌಶಲ್ಯ, ಕ್ರಿಯಾಶೀಲತೆಯಿಂದ ಅಭಿವೃದ್ಧಿ ಸಾಧ್ಯ: ಅಮರಶೆಟ್ಟಿ

ಉತ್ತಮ ಕೌಶಲ್ಯ, ಕ್ರಿಯಾಶೀಲತೆಯಿಂದ ಅಭಿವೃದ್ಧಿ ಸಾಧ್ಯ:  ಅಮರಶೆಟ್ಟಿ

ಶಿಗ್ಗಾವಿ 19: ಎಜ್ಯುಕೇಶನ ಡೆವಲಪಮೆಂಟ್ ಸಂಸ್ಥೆಗಳು ಶಾರ್ಟಹ್ಯಾಂಡ್ ಕೋರ್ಸ (ಸಂಕ್ಷಿಪ್ತ ತರಬೇತಿ) ಮಾಡುವಾಗ ಉತ್ತಮ ಕೌಶಲ್ಯ ಮತ್ತು ಕ್ರಿಯಾಶೀಲತೆಯಿಂದ, ತರಬೇತಿ ನಡೆಸಿ ಇದರಿಂದ ಶಿಬಿರಾರ್ಥಿಗಳ ಅಭಿವೃದ್ದಿಯೊಂದಿಗೆ ಸಂಸ್ಥೆಗಳು ಕೂಡಾ ಬೆಳೆಯಲು ಸಾಧ್ಯವೆಂದು ಕರ್ನಾಟಕ ರೇಶ್ಮೆ ಮಾರಾಟ ನಿಗಮಮಂಡಳಿ ಅಧ್ಯಕ್ಷ ಸವಿತಾ ಅಮರಶೆಟ್ಟಿ ಹೇಳಿದರು.

ಪಟ್ಟಣದ ಏಕದಂತ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ ನಿಯಮಿತ ಹಾವೇರಿ, ಸುವರ್ಣ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ (ಕಿಯೋನಿಕ್ಸ್ ಫ್ರಾಂಚೈಸಿ) ಧಾರವಾಡ, ಏಕದಂತ ಕೌಶಲ್ಯ ತರಬೇತಿ ಕೇಂದ್ರ ಶಿಗ್ಗಾಂವ ಇವರ ಸಂಯುಕ್ತ ಆಶ್ರಯದಲ್ಲಿ 2019-20 ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯ  ವಿಶೇಷ ಕೇಂದ್ರೀಯ ನೆರವಿನಡಿ ನಡೆಯುವ ಉಚಿತ ತರಭೇತಿಯ ಉದ್ಘಾಟನೆ ನೆರವೇರಿಸಿ  ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರಲ್ಲಿ ಗಟ್ಟಿತನ ಮತ್ತು ವಿಶೇಷ ಕೌಶಲ್ಯ, ಬುದ್ದಿಶಕ್ತಿ, ಕೆಲಸ ಮಾಡುವ ಶಕ್ತಿಯಿದೆ.  ಧೈರ್ಯ ಸಾಮರ್ಥ್ಯದಿಂದ ಇಂಟರವ್ಯೂ ತರಬೇತಿ ಮುಗಿಸಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದರು.

ಅಧ್ಯಕ್ಷತೆಯನ್ನು ಸುವರ್ಣ ಎಜುಕೆಶನ್ ಟ್ರಷ್ಟ್ ವಿಶ್ವನಾಥ ಅಮರಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜೆ.ಟಿ.ಎಪ್.ಇ. ಶಿಕ್ಷಣ ಸಂಸ್ಥೆ ಗಂಗಮ್ಮ ಬೊಮ್ಮಾಯಿ ಸ್ಕೂಲ್ ಸವಣೂರ ಅಧ್ಯಕ್ಷರಾದ ಶಿವಾನಂದ ಬೋರಶೆಟ್ಟಿ ಹಾಗೂ ಸುವರ್ಣ ಎಜುಕೆಶನ ಟ್ರಷ್ಟ್ ಕಾರ್ಯದರ್ಶಿ ಸವಿತಾ ವಿ. ಅಮರಶೆಟ್ಟಿ, ಡಾ.  ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮ ನಿಯಮಿತ ಹಾವೇರಿ ಜಿಲ್ಲಾ ವ್ಯವಸ್ಥಾಪಕ ಆರ್.ಎಚ್.ನಾಯ್ಕರ, ಏಕದಂತ ಕೌಶಲ್ಯ ತರಬೇತಿ ಕೇಂದ್ರದ ಮುಖ್ಯಸ್ಥ ರಂಗನಾಥ.ಎಮ್.ಎ. ಸಾಯಿ ಕಂಪ್ಯೂಟರ ಹಾವೇರಿ ಮುಖ್ಯಸ್ಥ ರಾಜೇಂದ್ರ ಪೂಜಾರ, ಪರಮೇಶ ಲಮಾಣಿ ಪ್ರದೀಪ ಪಾಟೀಲ, ಗುಡ್ಡಪ್ಪ ಬಂಕಾಪೂರ, ಯಲ್ಲಪ್ಪ ಆಡ್ಕರ, ಯಲ್ಲಪ್ಪ ಓಲೆಕಾರ, ರವಿ ಪೂಲಮಳೆ ಸೇರಿದಂತೆ ನೂರಾರು ಶಿಬಿರಾರ್ಥಿಗಳು ಅನೇಕರು ಉಪಸ್ಥತರಿದ್ದರು.

ಸುದ್ದಿ ಓದಿ