ಆರೋಗ್ಯ ಪೂರ್ಣ ಸಮಾಜದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಡಾ. ಪ್ರಭುಗೌಡ
ತಾಳಿಕೋಟಿ: ಯಾವುದೇ ಒಂದು ಸಮಾಜ ಪ್ರಗತಿ ಹಾಗೂ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆ ಸಮಾಜದಲ್ಲಿರುವ ಜನರು ಆರೋಗ್ಯವಂತರಾಗಿರಬೇಕು. ಆರೋಗ್ಯ ಪೂರ್ಣವಾದ ಸಮಾಜದಿಂದ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ನಾಡಿನ ಖ್ಯಾತ ನೇತ್ರ ತಜ್ಞ, ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೆಳಿದರು.
ತಾಲೂಕಿನ ಶಳ್ಳಗಿ ಗ್ರಾಮದಲ್ಲಿ ಢಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಇವರ ಆರೋಗ್ಯ ಅಭಿಯಾನದ ಅಡಿಯಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಹಾಗೂ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ವಿಜಯಪೂರ ಇವರ ಸಹ ಭಾಗಿತ್ವದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಅಭಿಯಾನ ಹಾಗೂ ಆರೋಗ್ಯ ಜಾಗೃತಿ ಜಾಥಾದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮೀಣ ಬಾಗದ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ರೋಗಗಳು ಭಾಧಿಸದಂತೆ ನೊಡಿಕೊಂಡು ಆರೋಗ್ಯ ಸಮಸ್ಯೆಗಳ: ಕುರಿತು ವೈದ್ಯರೊಂದಿಗೆ ಸಮಾಲೋಚಿಸಿ ಪರಿಹಾರವನ್ನು ಕಾಣಬೇಕು ಗ್ರಾಮೀಣ ಜನರು ಆಸ್ಪತ್ರೆಗೆ ಬರಲು ವಿಳಂಬವಾಗಿ ರೋಗ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ನಾವು ಈ ಅಭಿಯಾನದ ಮೂಲಕ ಅವರ ಮನೆ ಬಾಗಿಲಿಗೆ ತಲುಪಿ ಅವರಿಗೆ ಆರೋಗ್ಯದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೆವೆ. ನಮ್ಮ ಆಸ್ಪತ್ರೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಖಾಯಿಲೆ ಹಾಗೂ ಬಿಎಲ್ಡಿಇ ಸಂಸ್ಥೆಯ ಸಹಕಾರದಿಂದ ಎಲ್ಲ ರೋಗಗಳಿಗೆ ಉಚಿತವಾಗಿ ಉಪಚಾರವನ್ನು ಹಾಗೂ ಶಸ್ತ್ರ ಚಿಕಿತ್ಸೆಯನ್ನು ಮಾಡಿಸುತ್ತೇವೆ ಎಂದರು. ನೂರಾರು ಗ್ರಾಮಸ್ಥರು ತಮ್ಮ ಆರೋಗ್ಯ ಸಮಸ್ಯೆ ಕುರಿತು ಡಾ. ಪ್ರಭುಗೌಡರೊಂದಿಗೆ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಬಾಲು ತಳವಾರ(ಅಸ್ಕಿ), ಮಲ್ಲನಗೌಡ ಬಿರಾದಾರ(ಬೆಕಿನಾಳ), ಮಲ್ಲನಗೌಡ ಆನೆಸೂರ(ಭಂಟನೂರ), ನಿಂಗನಗೌಡ ಬಿರಾದಾರ, ಜುನೇದ ನದಾಫ, ಸಂಗಮೇಶ ಪಾಟೀಲ, ಮಲ್ಲನಗೌಡ ಬಿರಾದಾರ, ಸಚೀನ ಚಡಚಣ ಮತ್ತೀತರರು ಉಪಸ್ಥಿತರಿದ್ದರು.