ಬೈಲಹೊಂಗಲ

ಯುವಕರು ಕೌಶಲ್ಯ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಿ

ಯುವಕರು ಕೌಶಲ್ಯ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಿ

ಲೋಕದರ್ಶನ ವರದಿ

ಬೈಲಹೊಂಗಲ 25: ಯುವಕರು ತಮ್ಮ ಕೌಶಲ್ಯ ವೃದ್ಧಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶ್ರಮಿಸಬೇಕು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.

     ಅವರು ಪಟ್ಟಣದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ  ನಡೆದ  ಆಯುಧ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜೀವನದಲ್ಲಿ ವಿದ್ಯೆ ಮತ್ತು ಸಂಸ್ಕಾರ ಬೇರುಗಳಿದ್ದಂತೆ, ವಿದ್ಯೆ ಕೇವಲ ಪ್ರಮಾಣ ಪತ್ರಕ ಸೀಮಿತವಾಗಿರಬಾರದು ಉತ್ತಮ ಸಂಸ್ಕಾರವನ್ನು ಹೊಂದಿರಬೇಕು, ಇಂದಿನ ಯುವಕರು ಕಾಯಕದಲ್ಲಿ ನಿಮ್ಮ ವೃತ್ತಿಯಲ್ಲಿ ಗೌರವ, ತಂದೆಯಲ್ಲಿ ವಿಶ್ವಾಸ ತಾಯಿಯಲ್ಲಿ ಪ್ರೀತಿ, ಗುರುಗಳಲ್ಲಿ ಭಕ್ತಿಯುಳ್ಳವರಾಗಿದ್ದರೆ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯಿಸಲು ಸಾಧ್ಯ' ಎಂದು ಹೇಳಿದರು. ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಯವರ ಕಾರ್ಯವೈಕರಿಯನ್ನು ಹಾಗೂ ವಿದ್ಯಾರ್ಥಿಗಳಲ್ಲಿರುವ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

     ಸಂಸ್ಥೆಯ ನಿರ್ದೇಶಕ  ಬಿ.ಎಸ. ಗುರನವರ, ಪ್ರಾಚಾರ್ಯ ಎಸ್.ಡಿ.ಮಡಿವಾಳರ ಮಾತನಾಡಿದರು.

    ವಿ.ಎಸ್.ಕೋರಿಮಠ,  ಎಸ್.ಯು.ಹುಲೇಪ್ಪನವರಮಠ,  ಶಿವಬಸಪ್ಪ,ತುರಮರಿ, ಪರವಯಾ ಪೂಜೇರಿ, ಮೃತ್ಯುಂಜಯ ಸ್ವಾಮಿ  ಹಿರೇಮಠ,  ಸಮಸ್ತ ಸಿಬ್ಬಂದಿ ವರ್ಗ ಮತ್ತು ಎಲ್ಲ ವಿದ್ಯಾರ್ಥಿಗಳು ಇದ್ದರು 

ಸುದ್ದಿ ಓದಿ