ಕಾರವಾರ

ತಿಳುಮಾತಿ ಪ್ರವಾಸಿ ತಾಣ ಅಭಿವೃದ್ಧಿ ಪಡಿಸಿ

ತಿಳುಮಾತಿ ಪ್ರವಾಸಿ ತಾಣ ಅಭಿವೃದ್ಧಿ ಪಡಿಸಿ

ಅನುದಾನ ಸಿಕ್ಕ ಯೋಜನೆ | ಡೆಮೋ ರೈಲು ಓಡಿಸಿ- ಸೈಲ್ ಆಗ್ರಹ

ಕಾರವಾರ 04:  ಕಾರವಾರ ಗೋವಾ ಮಧ್ಯೆ ಮೊದಲಿನಂತೆ ಡೆಮೋ ರೈಲು ಓಡಿಸಿ ಎಂದು ಮಾಜಿ ಶಾಸಕ ಸೈಲ್ ಕೊಂಕಣರೈಲ್ವೆಯನ್ನು ಆಗ್ರಹಿಸಿದರು. ಮಾಜಿ ಶಾಸಕ ಸತೀಶ್ ಸೈಲ್ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಧ್ಯಾಹ್ನ ಪತ್ರಿಕಾ ಭವನದಲ್ಲಿ ಮಾತನಾಡಿ, ಕಾರವಾರದಿಂದ ಪೆರ್ನಮ್ ಗೆ ಡೆಮೋ ರೈಲು ಸಂಚಾರ ಪ್ರಾರಂಭಿಸಲು ಒತ್ತಾಯಿಸಿದರು. ಇದರಿಂದ ನೂರಾರು ಯುವಕರು ಕಾರವಾರದಿಂದ ಗೋವಾಕ್ಕೆ ಉದ್ಯೋಗ ಅರಸಿ ಹೋಗುತ್ತಿದ್ದು, ಪೆಟ್ರೋಲ್ ದರ ಹೆಚ್ಚಿದೆ. ಬೈಕ್ ಮೇಲೆ ಓಡಾಟ ವೆಚ್ಚದಾಯಕವಾಗಿದೆ. ಅನೇಕ ಯುವಕ -ಯುವತಿಯರು ಔಷಧಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ದಿನವೂ ಬಸ್ ಹಾಗೂ ಬೈಕ್ ನಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಕೋವಿಡ್ ಕಡಿಮೆಯಾದರೂ ರೈಲು ಸಂಚಾರ ಪ್ರಾರಂಭವಾಗಿಲ್ಲ. ಕಾರವಾರ ಗೋವಾಕ್ಕೆ ಡೆಮೋ ರೈಲು ಆರಂಭವಾಗಿಲ್ಲ. ಕಾರಣ ತಿಳಿಯುತ್ತಿಲ್ಲ ಎಂದು ಮಾಜಿ ಶಾಸಕ ಆಶ್ಚರ್ಯ ವ್ಯಕ್ತಪಡಿಸಿದರು.

ಕಾರವಾರಕ್ಕೆ ಮಾಜಾಳಿ, ಸದಾಶಿವಗಡ, ಕಡವಾಡ ಸೇರಿಸಿ ಮಹಾನಗರ ಪಾಲಿಕೆ ಮಾಡಬೇಕು. ಇದಕ್ಕೆ ನನ್ನ ಸ್ವಾಗತವಿದೆ.ಮಹಾನಗರ ಪಾಲಿಕೆಯಾದರೆ ಹೆಚ್ಚಿನ ಅನುದಾನ ಸಿಗುತ್ತದೆ. ಮಹಾನಗರ ಪಾಲಿಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದ 500 ಮೀಟರ್ ಎಡಬಲದಲ್ಲಿ ಸಿಆರ್ ಝೇಡ್ ನಿಯಮ ಸಡಿಲಿಕೆಯಾಗಿ ಅಭಿವೃದ್ಧಿ ಹಾದಿ ತೆರೆದುಕೊಳ್ಳುತ್ತದೆ. ಮೇಲಾಗಿ ಸೀಬರ್ಡ ಯೋಜನೆಯೊಳಗೆ 10 ಸಾವಿರ ಮನೆಗಳ ನಿರ್ಮಾಣವಾಗುತ್ತಿವೆ. ಇದರಿಂದ ಕಾರವಾರ ನಗರ ಮತ್ತಷ್ಟು ಬೆಳೆಯಲಿದೆ .ಹಾಗಾಗಿ ಮಹಾನಗರ ಪಾಲಿಕೆಯಾಗಿ ಭವಿಷ್ಯದಲ್ಲಿ ಕಾರವಾರ ಬದಲಾಗಲಿದೆ  ಎಂದರು. ಅನುದಾನ ಸಿಕ್ಕ ಯೋಜನೆ ಜಾರಿ ಮಾಡಿ: ನನ್ನ ಕಾಲದ ಯೋಜನೆ ಅನುಷ್ಟಾನ ಮಾಡಿ. ನಾನು ಅಡ್ಡಿ ಮಾಡಲ್ಲ. ಹೊಸ ಯೋಜನೆ ಸಹ ತನ್ನಿ ಎಂದರು. ಸದಾಶಿವಗಡ ಸಾವರ ಪೈ ಗೋಮಾಳದಲ್ಲಿ ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿ ಮಾಡಿ. ಅದರಿಂದ ಯಾರ ಮನೆಯೂ ಭೂಸ್ವಾಧೀನ ಆಗಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೆಎಸ್ ಸಿಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್) 13  ಎಕರೆ  ಜಾಗ ನೀಡಿದೆ.   ಆದರೆ ಶಾಸಕರು ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿ ಗೆ ಆಸಕ್ತಿವಹಿಸಿಲ್ಲ. ಅಲ್ಲಿನ ಜನರ (ಸಾವರ ಪೈ ಗೋಮಾಳ) ಮನೆಗಳು ವಶವಾಗಲಿವೆ ಎಂಬ ಸುಳ್ಳು ಸುದ್ದಿ ಹೋಗಲಾಡಿಸಲು ಪ್ರಯತ್ನಿಸಿಲ್ಲ ಎಂದು ಮಾಜಿ ಶಾಸಕ  ಸತೀಶ್ ಸೈಲ್ ಹೇಳಿದರು. 

ಕ್ರಿಕೆಟ್ ಕ್ರೀಡಾಂಗಣ ಬಂದರೆ ಈ ಭಾಗದ ಅಭಿವೃದ್ಧಿ ಗೆ ನೆರವಾಗಲಿದೆ ಎಂದರು.

ತಿಳುಮಾತಿ ಅಭಿವೃದ್ಧಿ; ತಿಳುಮಾತಿ ಪ್ರವಾಸಿ ತಾಣ ಅಭಿವೃದ್ಧಿಗೆ  ನಾನು ಶಾಸಕನಾಗಿದ್ದಾಗ ಹಣ ಬಿಡುಗಡೆಯಾಗಿ, ಟೆಂಡರ್ ಸಹ ಆಗಿತ್ತು. ಆದರೆ ಟೆಂಡರ್ ಪಡೆದವರು ಕೆಲಸ ಬಿಟ್ಟರು. ಮರು ಟೆಂಡರ್ ಯಾಕೆ ಆಗಿಲ್ಲ ಎಂದು ಪಿಡಬ್ಲುಡಿ ಇಲಾಖೆ ಹೇಳಬೇಕು. ಜಿಲ್ಲಾಧಿಕಾರಿಗಳ ಜೊತೆ  ಈ ಸಂಬಂಧ ಚರ್ಚಿಸುವೆ ಎಂದು ಮಾಜಿ ಶಾಸಕರು ಹೇಳಿದರು. ಪ್ರವಾಸಿ ತಾಣ ವಿಶ್ವದ ಅಪರೂಪದ ಸ್ಥಳವಾಗಿ ತಿಳುಮಾತಿ ಹೊರಹೊಮ್ಮಲಿದೆ ಎಂದರು. ಬರುವ ದಿನಗಳಲ್ಲಿ ಪೆಟ್ರೋಲ್, ಡೀಜಲ್, ಗ್ಯಾಸದ ಸಿಲೆಂಡರದ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ ಎಂದರು. ಜಿಲ್ಲಾ ಪಂಚಾಯತಿ ಚುನಾವಣೆಗೆ ತಯಾರಿ ಮಾಡಿದ್ದೇವೆ. ಸ್ಪರ್ಧ ಖಚಿತ ಎಂದರು . ಪ್ರಭಾಕರ ಮಾಳ್ಸೇಕರ್, ಸಮೀರ ನಾಯ್ಕ, ಮುಂತಾದವರು ಮಾಜಿ ಶಾಸಕರ ಜೊತೆ ಇದ್ದರು.

ಸುದ್ದಿ ಓದಿ