ಕಾರವಾರ

ದೇವರಾಜ ಅರಸು ಕೊಡುಗೆ ಅಪಾರ: ಭಟ್

ದೇವರಾಜ ಅರಸು ಕೊಡುಗೆ ಅಪಾರ: ಭಟ್

ಮುಂಡಗೋಡ: ಊಳುವವನೆ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣೆ ಕಾನೂನು ಜಾರಿಗೆ ತಂದ ಹಾಗೂ ಹಿಂದುಳಿದ ವರ್ಗಗಳ ಏಳ್ಗೆಯ ಹರಿಕಾರರಾದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ ಜಿ.ಬಿ ಭಟ್ ಹೇಳಿದರು. 

ಶುಕ್ರವಾರ ಪಟ್ಟಣದ ಮಿನಿ ವಿಧಾನಸೌದ ಸಭಾಂಗಣದಲ್ಲಿ ಡಿ. ದೇವರಾಜ ಅರಸು ಅವರ 106 ನೇ ಜಯಂತ್ಯುತ್ಸವವನ್ನು ಆಚರಿಸಿ ಮಾತನಾಡಿದರು. ಸಮಾಜದಲ್ಲಿ ಯಾವುದೇ ವರ್ಗ ಕೂಡ ಶೋಷಣೆಗೊಳಗಾಗಬಾರದೆಂಬ ಉದ್ದೇಶದಿಂದ ಹಿಂದುಳಿದ ವರ್ಗಗಳ ಸಬಲಿಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. 

ತಾಲೂಕಾ ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಸುಜಾತಾ ಹಂಜಿ ಮಾತನಾಡಿದರು. ಕಂದಾಯ ಇಲಾಖೆ ಹಾಗೂ ಹಿಂದುಳಿದ ವರ್ಗಗಗಳ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಪೋಟೊ: 20ಎಮ್‌.ಎನ್‌.ಡಿ4- ಮುಂಡಗೋಡ: ಶುಕ್ರವಾರ ಪಟ್ಟಣದ ಮಿನಿ ವಿಧಾನಸೌದ ಸಭಾಂಗಣದಲ್ಲಿ ಡಿ. ದೇವರಾಜ ಅರಸು ಅವರ 106 ನೇ ಜಯಂತ್ಯುತ್ಸವವನ್ನು ಆಚರಿಸಲಾಯಿತು. 


ಸುದ್ದಿ ಓದಿ