ರಾಣೆಬೆನ್ನೂರ

ಸುಕ್ಷೇತ್ರ ದೇವರಗುಡ್ಡದಲ್ಲಿ ಭಾರತ ಹುಣ್ಣಿಮೆ ಮಹೋತ್ಸವ

ಸುಕ್ಷೇತ್ರ ದೇವರಗುಡ್ಡದಲ್ಲಿ ಭಾರತ ಹುಣ್ಣಿಮೆ ಮಹೋತ್ಸವ

ರಾಣೇಬೆನ್ನೂರು 29:  ತಾಲೂಕಿನ ಸುಕ್ಷೇತ್ರ ಇತಿಹಾಸ ಪ್ರಸಿದ್ಧ ಗುಡ್ಡ ಗುಡ್ದಾಪುರ ಗ್ರಾಮದ ದೇವರಗುಡ್ಡ ಶ್ರೀ ಮಾಲತೇಶ ಮಾರ್ತಾಂಡಭೈರವ ಕ್ಷೇತ್ರದಲ್ಲಿ ಕಳೆದ  ಜ. 28 ರಿಂದ ಭಾರತ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮಗಳು ಆರಂಭವಾಗಿದ್ದು, ಶನಿವಾರ ದಿಂದ ರಥಸಪ್ತಮಿ ( ಕಡುಬಿನ ಕಾಳಗ ) ಫೆ. 5ರಂದು  ಭಾರತ ಹುಣ್ಣಿಮೆ.  ಫೆ. 7 ರಂದು ಮಂಗಳವಾರ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಮೈಲಾರ ಲಿಂಗೇಶ್ವರನ ಸನ್ನಿಧಿಯಲ್ಲಿ ಸಂಜೆ 5:30ಕ್ಕೆ ವಾರ್ಷಿಕ ಸಂಪ್ರದಾಯದ ಮಹಾ ಕಾರಣಿಕೋತ್ಸವ ಜರುಗುವುದು. 18ರಂದು ಶನಿವಾರ  ಮಹಾಶಿವರಾತ್ರಿ ಮತ್ತು 18ರಂದು ರವಿವಾರ ಅನ್ನ ಸಂತರ್ಪಣೆ ಜರುಗುವುದು. ಕಾರಣ ಭಕ್ತಾದಿಗಳು ಪ್ರಕಟಣೆಯನ್ನು ಗಮನಿಸಿ ಕ್ಷೇತ್ರದ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ