ದೇವರದಾಸಿಮಯ್ಯನವರ ಜಯಂತ್ಯೋತ್ಸವ
ಭರತ ಭೂಮಿ ಭಾವೈಕ್ಯತೆಯ ನಾಡು-ಶಂಕ್ರಣ್ಣ ಹೊನ್ನಾಳಿ
ರಾಣೀಬೆನ್ನೂರ.ಏ.19 ಭರತ ಭೂಮಿಯು ವಿಶ್ವದಲ್ಲಿಯೇ ಅತ್ಯಂತ ಪರಮ ಪವಿತ್ರ ಭೂಮಿಯಾಗಿದೆ. ಶ್ರೇಷ್ಠ ರಾಷ್ಟ್ರ ನಮ್ಮದು, ಇಂತಹ ರಾಷ್ಟ್ರದಲ್ಲಿ ಆಧ್ಯಾತ್ಮಿಕವಾಗಿ ಸಮೃದ್ಧ ದೇಶವನ್ನು ಕಟ್ಟುವಲ್ಲಿ ನಮ್ಮ ಸಂತ ಶರಣರ ಸೇವಾ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ನೇಕಾರ ಸಮುದಾಯದ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕ್ರಣ್ಣ ನ್ಯಾಮತಿ ಹೇಳಿದರು. ಅವರು ಇಲ್ಲಿನ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಆದ್ಯ ವಚನಕಾರ ಸಂv ದೇವರದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ದೇಶ ಅತ್ಯಂತ ಬಲಿಷ್ಠವಾಗಿದೆ, ಅದಕ್ಕೆ ಕಾರಣ ನಮ್ಮ ತಪೋಭೂಮಿಯಲ್ಲಿ ಜನ್ಮ ತಳೆದ ಸಾದು, ಸಂತರು, ಋಷಿಮುನಿಗಳು, ಮಹಾತ್ಮರು, ಶಿವಯೋಗಿಗಳು, ಅವತರಿಸಿ ಶರಣರು ಮತ್ತು ಮಠ ಪೀಠಗಳು ಕಾರಣವಾಗಿವೆ. ತಮ್ಮ ಭೌದ್ಧಿಕ ಶಕ್ತಿಯಿಂದ ಸದಾಕಾಲ ಭಕ್ತರ ಉದ್ಧಾರಕ್ಕಾಗಿ ಧರ್ಮ ಮತ್ತು ಆಧ್ಯಾತ್ಮ ಬೋದನೆಯ ಮೂಲಕ ಸಮಗ್ರ ಭಾರತಿಯರನ್ನು ಭಾವೈಕ್ಯತೆಯಿಂದ ಬಾಳಿ-ಬದುಕಲು ಮತ್ತು ಸಮೃದ್ಧ ರಾಷ್ಟ್ರವನ್ನು ಕಟ್ಟಲು ಕಾರಣೀಭೂತರಾಗಿದ್ದಾರೆ. ಅಂತಹ ಭೂಮಿಯಲ್ಲಿ ಜನ್ಮ ತಳೆದ ನಾವುಗಳು ಪುಣ್ಯವಂತರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ತಾಲೂಕಾ ಅಧ್ಯಕ್ಷ ಕರಸಪ್ಪ ನೀಲಗುಂದ, ಮುಖಂಡ ಬಸವರಾಜ ಲಕ್ಷ್ಮೇಶ್ವರ, ಹನುಮಂತಪ್ಪ ಮುಕ್ತೇನಹಳ್ಳಿ, ಎಸ್.ಸಿ.ಮಾರನಾಳ, ಡಾ.ಎಚ್.ಕೆ.ಕದರಮಂಡಲಗಿ, ಆರ್.ಕೆ.ಹುಬ್ಬಳ್ಳಿ, ಶಿವಾನಂದ ಬಾಗಾದಿ, ನಾಗರಾಜ ಅಗಡಿ, ಚಂದ್ರಪ್ಪ ಉದಗಟ್ಟಿ, ಕಾಂತೇಶ ಕದರಮಂಡಲಗಿ, ಬಸವರಾಜ ಐರಣಿ, ರಾಘವೇಂದ್ರ ಕುಲಕರ್ಣಿ, ಸೋಮಣ್ಣ ಮಾಳಗಿ ಸೇರಿದಂತೆ ಸಮಾಜದ ಅನೇಕ ಗಣ್ಯರು, ವರ್ತಕರು ಉಪಸ್ಥಿತರಿದ್ದರು. ಹೆಚ್-ಆರ್ ಎನ್ ಆರ್ 03 ರಾಣೀಬೆನ್ನೂರ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಂತ ದೇವರದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಮಾಜದ ಮುಖಂಡರು.