ತಾಳಿಕೋಟಿ

ದೇವರ ಹಿಪ್ಪರಗಿ ಶಾಸಕ ಸೋಮನಗೌಡಗೆ ಸನ್ಮಾನ

ದೇವರ ಹಿಪ್ಪರಗಿ ಶಾಸಕ ಸೋಮನಗೌಡಗೆ ಸನ್ಮಾನ

ತಾಳಿಕೋಟಿ 25: ದೇ. ಹೀಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ)ಇವರು ಕ್ಷೇತ್ರದಲ್ಲಿ ಮಾಡುತ್ತೀರುವ ಅಭಿವೃದ್ಧಿ ಕಾರ್ಯ ಹಾಗೂ ವಿಶೇಷವಾಗಿ ರೈತರಿಗೆ ಅನುಕೂಲ ಮಾಡಿಕೊಡಲು ಹಾಕಿಕೊಂಡಿರುವ ನೀರಾವರಿ ಯೋಜನೆಗಳಿಗೆ ಮೆಚ್ಚಿ ಪ್ರಗತಿಪರ ರೈತರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ರೈತ ಮುಖಂಡ ಅಜೀಜ ಎಲಿಗಾರ ಮಾತನಾಡಿ ಶಾಸಕ ಸೋಮನಗೌಡರು ನುಡಿದಂತೆ ನಡೆಯುವ ಶಾಸಕ, ರೈತ ಕುಟುಂಬದ ಹಿನ್ನೆಲೆ ಇರುವ ಅವರಿಗೆ ರೈತರ ಕುರಿತು ಅಪಾರ ಕಾಳಜಿ ಇದೆ ಅವರೆಂದೂ ಅಭಿವೃದ್ಧಿಯಲ್ಲಿ ಜಾತಿರಾಜಕಾರಣ ಮಾಡಿಲ್ಲ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಕಾರ್ಯದಶರ್ಿ ಭೀಮನಗೌಡ ಲಚ್ಯಾಣ ಗುತ್ತೀಗೆದಾರ ರವಿ ಪಾಟೀಲ, ಕಾಶಿನಾಥ ತಳಕೇರಿ ಹಾಗೂ ರೈತರು ಉಪಸ್ಥಿತರಿದ್ದರು 

ಸುದ್ದಿ ಓದಿ