ಮೇಕೆ ಕಳ್ಳರ ಬಂಧನ
ತಾಳಿಕೋಟೆ 24: ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ಕುರಿಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ತಾಳಿಕೋಟೆ ಠಾಣೆಯ ಪೊಲೀಸ್ರು ಆರೋಪಿತರಿಂದ 26 ಮೇಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮೈಲೇಶ್ವರ ಗ್ರಾಮದ ಜಮೀನದಲ್ಲಿ ತಾಳಿಕೋಟೆ ಪಟ್ಟಣದ ನಿವಾಸಿ ಮಹಮ್ಮದಆದಂ ಅಬ್ದುಲ್ರೆಹಮಾನ ಅತ್ತಾರ ಅವರು ಮೇಕೆಗಳನ್ನು ಸಾಕಾಣಿಕೆ ಮಾಡಿದ್ದರು. ಇದೇ ತಿಂಗಳು 17 ರಂದು 26 ಮೇಕೆಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದರು. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಕೈಕೊಂಡ ಪೊಲೀಸ್ರು ತಾಲೂಕಿನ ಕೊಡಗಾನೂರ ಗ್ರಾಮದ ದಾವಲಸಾಬ ರಾಜೇಸಾಬ ಮುಲ್ಲಾ, ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಹೆಬ್ಬಾಳಕೇರಿಯ ಖಾಸಿಂಸಾಬ್ ಮಹಮ್ಮದಸಾಬ್ ಬಲಶೇಟ್ಟಿಹಾಳ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮೆಕೆಗಳನ್ನು ಕಳುವು ಮಾಡಿದ್ದಾಗಿ ಒಪ್ಪಿಕೊಂಡಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿವಾಯ್ಎಸ್ಪಿ ಅರುಣಕುಮಾರ ಕೋಖುರ, ಸಿಪಿಆಯ್ ಆನಂದ ವಾಗ್ಮೋಡೆ ಮಾರ್ಗದರ್ಶನದಲ್ಲಿ ಎಸೈ ವಿನೋದ ದೊಡ್ಡಮನಿ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಶ್ವಿಯಾಗಿದೆ. ತಂಡದಲ್ಲಿ ಎಎಸ್ಆಯ್ ಅಶೋಕ ನಾಯ್ಕೋಡಿ, ಆರ್.ಎಸ್.ಭಂಗಿ, ಸಿಬ್ಬಂದಿಗಳಾದ ಸಂಗಮೇಶ ಚಲವಾದಿ, ರವಿ ಬಿರಾದಾರ, ಗೀರೀಶ ಚಲವಾದಿ, ಎಮ್.ಎಲ್.ಪಟ್ಟೇದ, ಸೈಪುನಸಾಬ ಕುರಿ, ಆರ್.ಎಸ್.ಒಡೆಯರ. ಎಸ್.ಬಿ.ಬಿರಾದಾರ ಇದ್ದರು.