ಶಿಗ್ಗಾವ್

ಅತೀವೃಷ್ಟಿಗೆ ಬಂದ ಬೆಳೆ ನಾಶ: ರೈತ ಆತ್ಮಹತ್ಯೆ

ಅತೀವೃಷ್ಟಿಗೆ ಬಂದ ಬೆಳೆ ನಾಶ: ರೈತ ಆತ್ಮಹತ್ಯೆ


ಲೋಕದರ್ಶನ ವರದಿ 

ಶಿಗ್ಗಾವಿ 25: ಅತೀವೃಷ್ಟಿಗೆ ಬಂದ ಬೆಳೆ ಹಾಳಾಯಿತು ಎಂದು ಮನನೊಂದು ರೈತನೋರ್ವ ಮಾವೀನ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕುನ್ನೂರ ಗ್ರಾಮದ ಚಿತ್ರಗಾರ ತೋಟದಲ್ಲಿ ಸೋಮವಾರ ನಡೆದಿದೆ.  

ಕುನ್ನೂರು ಗ್ರಾಮದ ಗೋವಿಂದಪ್ಪ ಯಲ್ಲಪ್ಪ ಬಸರಿಕಟ್ಟಿ (38) ಮೃತಪಟ್ಟ ದುದೈವಿ ಎಂದು ಗುರುತಿಸಲಾಗಿದೆ. ರಾಮಣ್ಣ ಚಿತ್ರಗಾರ ಅವರ ತೋಟದಲ್ಲಿ ಮಾವಿನ ಗಿಡವೊಂದಕ್ಕೆ ತನ್ನ ಲಪಾಟಿಯಿಂದ ನೇಣು ಬಿಗಿದುಕೊಂಡಿ ದ್ದಾನೆ. ಕಳೆದ 4-5 ದಿನಗಳಿಂದ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದರಿಂದ ತನ್ನ ತಂದೆ ಹೆಸರಲ್ಲಿ 6.20 ಎಕರೆ ಜಮೀನು ಇದೆ. ಈ  ಜಮೀನಿನಲ್ಲಿ ಈ ವರ್ಷ ಭತ್ತ, ಗೋವಿನಜೋಳ ಬೆಳೆ ಬೆಳೆದಿದ್ದ. ಕೃಷಿಗೆ ದುಂಡಶಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 2.50 ಲಕ್ಷ ಸಾಲ ಪಡೆದಿದ್ದ. ಬೆಳೆದ ಬೆಳೆಯೂ ನೆಲಕ್ಕುರುಳಿ ಹಾನಿಯಾಗಿದ್ದನ್ನು ಕಂಡು ಮಾಡಿದ ಸಾಲ ತೀರಿಸಲಾಗದೆ ಅಧೈರ್ಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ಪತ್ನಿ ಲಲಿತವ್ವ ಗೋವಿಂದಪ್ಪ ಬಸರಿಕಟ್ಟಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಘಟನೆ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪಿ.ಎಸ್‌.ಐ. ಎಸ್‌.ಕೆ.ಪೊಲೀಸಗೌಡ್ರ ತನಿಖೆ ಕೈಗೊಂಡಿದ್ದಾರೆ. 

ಸಾಂತ್ವನ : ಮೃತ ರೈತನ ಮನೆಗೆ ಬೇಟಿ ನೀಡಿ ಸಾಂತ್ವನ ತಿಳಿಸಿದ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದ ಬಿಜೆಪಿ ಮುಖಂಡರು, ಸರಕಾರದಿಂದ ಮೃತ ಕುಟುಂಬಕ್ಕೆ ಅಗತ್ಯ ನೆರುವು ಕಲ್ಪಿಸುವ ಭರವಸೆ ನೀಡಿದರು. ಬಿ.ಎಮ್‌.ಪಾಟೀಲ, ಗಂಗಪ್ಪ ಹುಲ್ಲೂರ, ರೇಣುಕನಗೌಡ್ರ ಪಾಟೀಲ, ಬಸನಗೌಡ್ರ ರಾಮನಗೌಡ್ರ, ಮಲ್ಲೇಶಪ್ಪ ದೊಡ್ಡಮನಿ, ವಸಂತ ತಿಮ್ಮಾಪುರ, ಚಂದ್ರಣ್ಣ ಕಟನೂರು, ಸಂತೋಷ ದೊಡ್ಡಮನಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಪ್ರಕಾಶ ಓಂದಕರ,  ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ