ದರ ಕುಸಿತಕ್ಕೆ ಟೊಮೆಟೊ ಬೆಳೆ ನಾಶ
ಹೂವಿನಹಡಗಲಿ :02-ರೈತರು ಸಾಕಷ್ಟು ನಿರೀಕ್ಷೆಯಲ್ಲಿ ಟೊಮೆಟೊ ಬಿತ್ತನೆ ಮಾಡಿದ್ದಾರೆ ಇದೀಗ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲೂಕಿನ ರೈತರು ಬೆಳೆ ನಾಶಕ್ಕೆ ಮುಂದಾಗಿದ್ದಾರೆ.ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ಕಾರ್ಮಿಕರ ಕೂಲಿ ಹಣ ಹಿಂತಿರುಗಿಲ್ಲ ಇದು ರೈತರ ಸಂಕಷ್ಟಕ್ಕೆ ಸಿಲುಕಿಸಿದೆ.
ಪಟ್ಟಣದ ಬಸವರಾಜಪ್ಪ ಎಂಬುವವರು ಒಂದುವರೆ ಎಕರೆಯಲ್ಲಿ ಭರ್ಜರಿ ಫಸಲು ಬಂದಿದ್ದು,15ಸಾವಿರ ರೂ. ಖರ್ಚು ಮಾಡಿದರೇ 5ಸಾವಿರವೂ ಕ್ಕೆ ಸೇರಿಲ್ಲ. ಈಬಾರಿ ಬೆಲೆ ಕುಸಿತದಿಂದ ಸಂಕಷ್ಟ ಎಂದುರಾಗಿದೆ ಎನ್ನುತ್ತಾರೆ. ತಾಲೂಕಿನ ಮಿರಾಕೊರನಹಳ್ಳಿ ರೈತ ಪಿ.ಎಂ.ಮಲ್ಲಿಕಾರ್ಜುನ ಎಂಬುವವರು ಟೊಮೆಟೊ ಬೆಳೆಯಲ್ಲಿ ಕುರಿಗಳನ್ನು ಬಿಟ್ಟು ಬೆಳೆ ನಾಶಕ್ಕೆ ಮುಂದಾಗಿದ್ದಾರೆ.ಖರ್ಚು ಮಾಡಿದ ಹಣ ಕೈಗೆ ಸಿಗದೇ ಸಾಲಕ್ಕೆ ಸಿಲುಕುತ್ತಿದ್ದಾರೆ. ಹೂವಿನಹಡಗಲಿ, ಹಿರೇಹಡಗಲಿ, ಮಾಗಳ, ಹೊಳಗುಂದಿ, ದಾಸನಹಳ್ಳಿ, ಹಿರೆಕೋಳಚಿಯಲ್ಲಿ 40ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದೆ. ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಅಳಲು. 25 ಕೆಜಿ ಬಾಕ್ಸ್ ಗೆ ಕೇವಲ 50ಕ್ಕೆ ಖರೀದಿಸುತ್ತಾರೆ. ಸಂತೆಯಲ್ಲಿ 10ಕ್ಕೆ ಒಂದು ಕೆಜಿ ಮಾರಾಟವಾಗುತ್ತಿದೆ ಮದ್ಯವರ್ತಿಗಳು ಲಾಭ ತೆಗೆದುಕೊಳ್ಳುತ್ತಾರೆ ಇತ್ತ ಬೆಳೆ ಬೆಳೆದ ರೈತರಿಗೆ ಲಾಭಕ್ಕಿಂದ ಹೆಚ್ಚು ನಷ್ಟವಾಗುತ್ತಿದೆ.