ಬೈಲಹೊಂಗಲ

ಕಪ್ರ್ಯೂ ವಿಧಿಸಿದರೂ ಪಟ್ಟಣದಲ್ಲಿ ಎಗ್ಗಿಲ್ಲದೆ ಜನಸಂಚಾರ

ಕಪ್ರ್ಯೂ ವಿಧಿಸಿದರೂ ಪಟ್ಟಣದಲ್ಲಿ ಎಗ್ಗಿಲ್ಲದೆ ಜನಸಂಚಾರ

ಲಾಕ್‍ಡೌನ್ ಲಾಭಕ್ಕೆ ಮುಂದಾದ ಅಂಗಡಿಕಾರರು: ಹೆಚ್ಚಿನ ದರಕ್ಕೆ ಗುಟಕಾ ಚೀಟಿ ಮಾರಾಟ

ಬೈಲಹೊಂಗಲ 26 :ಕೋವಿಡ್ ಪ್ರಕರಣಗಳು ವಿಪರೀತವಾಗುತ್ತಿರುವ ಮತ್ತು ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ಕೊರೊನಾ ಕಪ್ರ್ಯೂ ವಿಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದಲ್ಲಿ ಎಗ್ಗಿಲ್ಲದೆ ಜನಸಂಚಾರ ನಡೆಯಿತು.ಜನರು ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು. ಬಜಾರ ರಸ್ತೆಯಲ್ಲಿರುವ ಗುಟಕಾ ಅಂಗಡಿಗಳಿಗೆ ಬೆಳ್ಳಂ ಬೆಳಗ್ಗೆ ಧಾವಿಸಿ ಬಂದು ಗ್ರಾಹಕರು, ಗುಟುಕಾ ಖರೀದಿಸುತ್ತಿದ್ದರು. ಅಂಗಡಿಕಾರರು ಹೆಚ್ಚಿನ ದರಕ್ಕೆ ಗುಟಕಾ ಚೀಟಿ ಮಾರಾಟ ಮಾಡುತ್ತಿದ್ದರು. ಅನವಶ್ಯವಾಗಿ ಜನ ಸಂಚಾರ ಮಾಡಿದ್ದು ಕಂಡು ಬಂದಿತು. ಕಚೇರಿಗಳು ಜನರಿಂದ ತುಂಬಿದ್ದವು. ಹಲವು ಕಡೆಸರತಿ ಸಾಲಿನಲ್ಲಿ ನಿಂತು ತಮ್ಮ ಕೆಲಸ ಮಾಡಿಸಿಕೊಂಡರು. ಪಟ್ಟಣಕ್ಕೆ ಉದ್ಯೋಗ ಅರಸಿ ಬಂದಿದ್ದ ನೂರಾರು ಜನ, ಕಫ್ರ್ಯೂ ಕಾರಣದಿಂದಾಗಿ ಪಟ್ಟಣ ತೊರೆದು ಮರಳಿ ತಮ್ಮ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿರುವುದು ಕಂಡು ಬಂದಿತು.

ಕಫ್ರ್ಯೂದಿಂದಾಗಿ ಬಡ ಮತ್ತು ಮಧÀ್ಯಮ ವರ್ಗದವರು ಕಂಗೆಟ್ಟಿದ್ದಾರೆ. ಕಳೆದ ಬಾರಿ ಲಾಕ್‍ಡೌನ್‍ನಿಂದ ಉದ್ಯೋಗವಿಲ್ಲದೇ, ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಜನರಿಗೆ ಈ ಬಾರಿಯ ಮತ್ತೊಂದು 14 ದಿನದ ಕಫ್ರ್ಯೂ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.ಕಳೆದ ಬಾರಿ ಏಕಾಏಕಿ ಲಾಕ್‍ಡೌನ್‍ನಿಂದಾಗಿ ಊರು ತೊರೆಯದೇ ಪಟ್ಟಣದಲ್ಲಿ ತೊಂದರೆಗೆ ಒಳಗಾದ ಜನಸಾಮಾನ್ಯರು, ಈ ಬಾರಿ ಕೂಡ ತೊಂದರೆ ಅನುಭವಿಸುವುದು ಬೇಡ ಎಂದು ಪಟ್ಟಣವನ್ನು ತೊರೆಯಲು ಮುಂದಾಗಿದ್ದಾರೆ.

ಇತರೆ ಕಾರ್ಯದಲ್ಲಿ ನಿರತರಾಗಿರುವವರಿಗೆ, ಅನೇಕ ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಕಫ್ರ್ಯೂದಿಂದ ಸಾಕμÀ್ಟು ತೊಂದರೆಗೆ ಒಳಗಾಗಿದ್ದು, ಕೆಲಸವಿಲ್ಲದೇ ಅನಗತ್ಯ ಖರ್ಚಿನೊಂದಿಗೆ ದಿನ ದೂಡುವ ಬದಲು ಸ್ವಂತ ಊರಿಗೆ ತೆರಳುವ ಉದ್ದೇಶದಿಂದ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.ಬೈಲಹೊಂಗಲ- ಬಜಾರ ರಸ್ತೆಯಲ್ಲಿರುವ ಗುಟಕಾ ಅಂಗಡಿಗಳಿಗೆ ಬೆಳ್ಳಂ ಬೆಳಗ್ಗೆ ಧಾವಿಸಿ ಬಂದು ಗುಟುಕಾ ಖರೀದಿಸುತ್ತಿರುವ ಗ್ರಾಹಕರು, ಹೆಚ್ಚಿನ ದರಕ್ಕೆ ಗುಟಕಾ ಚೀಟಿ ಮಾರಾಟ ಮಾಡುತ್ತಿರುವ ಅಂಗಡಿಕಾರರು.

ಸುದ್ದಿ ಓದಿ